Wednesday, June 24, 2026
Homeಕರಾವಳಿಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧ; ಸ್ಥಳೀಯರಿಂದ ರಕ್ಷಣೆ

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧ; ಸ್ಥಳೀಯರಿಂದ ರಕ್ಷಣೆ

- Advertisement -
- Advertisement -

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಬಳಿಯಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧರೋರ್ವರನ್ನು ರಕ್ಷಿಸಲಾದ ಘಟನೆ ಶುಕ್ರವಾರದಂದು ಬೆಳಗ್ಗೆ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಂಗಳೂರಿನಿಂದ ಒಂಟಿಯಾಗಿ ಬಂದಿದ್ದ ವೃದ್ಧರೋರ್ವರು ಸ್ನಾನಘಟ್ಟದ ಬಳಿ ನೀರಿಗೆ ಇಳಿದಿದ್ದಾರೆ. ಬಳಿಕ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಸ್ಥಳದಲ್ಲಿರುವವರು ಗಮನಿಸಿದ್ದು, ತಕ್ಷಣವೇ ದೇವಳದ ಸಿಬ್ಬಂದಿ ಲೋಕಾನಾಥ್‌ ಅವರಿಗೆ ಮಾಹಿತಿ ನೀಡಿದ್ದರು. ಲೋಕನಾಥ್‌ ಅವರು ತಕ್ಷಣವೇ ಅಲ್ಲಿಗೆ ಆಗಮಿಸಿದ್ದು, ದೇವಸ್ಥಾನದ ಬಳಿಯಲ್ಲಿಯೇ ಅಂಗಡಿ ನಡೆಸುತ್ತಿದ್ದ ಗೋಪಾಲ್‌ ಹಾಗೂ ಇನ್ನೋರ್ವರ ಸಹಕಾರದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧರನ್ನು ನೀರಿನಿಂದ ಹೊರಕ್ಕೆ ಕರೆತಂದು, ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ. ರಕ್ಷಣೆ ವೇಳೆ ವೃದ್ಧ ವ್ಯಕ್ತಿ ನನ್ನನ್ನು ಯಾಕೆ ರಕ್ಷಿಸಿದ್ದೀರಿ, ನಾನು ಸಾಯಬೇಕು ಎಂದು ಹೇಳುತ್ತಿದ್ದರು. ಮನಸ್ಸಿಗೆ ಏನೋ ಬೇಜಾರಾಗಿ ಮನೆಯನ್ನು ಬಿಟ್ಟು ಒಂಟಿಯಾಗಿ ಬಂದಿದ್ದರು ಎಂದು ತಿಳಿದುಬಂದಿದೆ.

ಇನ್ನು ಮನೆಯವರ ಕುರಿತಂತೆ ಸ್ಥಳದಲ್ಲಿರುವವರು ವೃದ್ಧರಲ್ಲಿ ವಿಚಾರಿಸಿದಾಗ ಮನೆಯವರ ಬಗ್ಗೆ ಸ್ಪಷ್ಟ ಮಾಹಿತಿ ನೀಡದಿದ್ದು, ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಲಾಯಿತು.

- Advertisement -

Latest News

error: Content is protected !!