Wednesday, June 3, 2026
Homeತಾಜಾ ಸುದ್ದಿಗೃಹಲಕ್ಷ್ಮಿ ಯೋಜನೆಯ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ

ಗೃಹಲಕ್ಷ್ಮಿ ಯೋಜನೆಯ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ

- Advertisement -
- Advertisement -

ಬೆಳಗಾವಿ : ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತವಗ ಗ್ರಾಮದ ರೈತ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ಎತ್ತು ಖರೀದಿಸಿದ್ದಾರೆ.ಗೃಹಲಕ್ಷ್ಮಿ ಯೋಜನೆಯಿಂದ ಬರುವ 2 ಸಾವಿರ ರೂ. ಒಟ್ಟು ಸೇರಿಸಿ 22 ಸಾವಿರ ರೂ. ಕೊಟ್ಟು ಎತ್ತು ಖರೀದಿಸಿದ್ದಾರೆ.

ಬಸವ್ವ ಹಾಗೂ ಶಿವಪ್ಪ ದಂಪತಿ ಮನೆಯಲ್ಲಿ ಈ ಹಿಂದೆ ಒಂದೇ ಎತ್ತು ಇತ್ತು. ಹೀಗಾಗಿ ಬೇಸಾಯಕ್ಕಾಗಿ ಮತ್ತೊಂದು ಎತ್ತು ಖರೀದಿಸಲು ಗೃಹಲಕ್ಷ್ಮಿ ಹಣ ಜೋಡಿಸಿಕೊಂಡಿದ್ದಾರೆ. ಮಕ್ಕಳಿಲ್ಲದ ಬಸವ್ವ ಶಿವಪ್ಪ ಅವರದ್ದು ಸಣ್ಣ ಪ್ರಮಾಣದ ರೈತ ಕುಟುಂಬವಾಗಿದ್ದು, ಇದೀಗ ಗೃಹಲಕ್ಷ್ಮಿ ಯೋಜನೆಯ 22 ಸಾವಿರ ರೂ.ನಿಂದ ಮತ್ತೊಂದು ಎತ್ತು ಖರೀದಿಸಿದ್ದಾರೆ. ಬಸವ್ವ ಮನೆಗೆ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಮಹಾಂತೇಶ್ ಭೇಟಿ ನೀಡಿ ದಂಪತಿಗೆ ವೈಯಕ್ತಿಕವಾಗಿ ನೆರವು ನೀಡಿದ್ದಾರೆ.

- Advertisement -

Latest News

error: Content is protected !!