Monday, June 8, 2026
Homeಕರಾವಳಿಇನ್ಸ್ಟಾಗ್ರಾಂನಲ್ಲಿ ಬೆಳೆಯಿತು ಯುವಕನೊಂದಿಗೆ ಸ್ನೇಹ; ಗೆಳೆಯನನ್ನು ಹುಡುಕಿಕೊಂಡು ಚೆನ್ನೈನಿಂದ ಸುರತ್ಕಲ್ ಗೆ ಬಂದ ಎಂಬಿಬಿಎಸ್ ವಿದ್ಯಾರ್ಥಿನಿ

ಇನ್ಸ್ಟಾಗ್ರಾಂನಲ್ಲಿ ಬೆಳೆಯಿತು ಯುವಕನೊಂದಿಗೆ ಸ್ನೇಹ; ಗೆಳೆಯನನ್ನು ಹುಡುಕಿಕೊಂಡು ಚೆನ್ನೈನಿಂದ ಸುರತ್ಕಲ್ ಗೆ ಬಂದ ಎಂಬಿಬಿಎಸ್ ವಿದ್ಯಾರ್ಥಿನಿ

- Advertisement -
- Advertisement -

ಮಂಗಳೂರು; ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನನ್ನು ಹುಡುಕಿಕೊಂಡು ಬಂದು ಯುವತಿಯೊಬ್ಬಳು ಪೇಚಿಗೆ ಸಿಲುಕಿದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ರಾಜಸ್ಥಾನ ಮೂಲದ ಚೆನ್ನೈನಲ್ಲಿ ಎಂಬಿಬಿಎಸ್ ಓದುತ್ತಿದ್ದ ರೇಶು ಎಂಬ ವಿದ್ಯಾರ್ಥಿನಿಯೊಬ್ಬಳಿಗೆ ಇನ್ಸ್ಟಾಗ್ರಾಂನಲ್ಲಿ ಸುರತ್ಕಲ್ ನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನ ಜೊತೆ ಸ್ನೇಹ ಬೆಳೆದಿದೆ. ಆತನ ಭೇಟಿಗಾಗಿ ಚೆನ್ನೈನಿಂದ  ರೇಶು ಮಂಗಳೂರಿಗೆ ಬಂದಾಗ ಆಕೆಯ ಬ್ಯಾಗ್‌ ಹಾಗೂ ಮೊಬೈಲ್‌ ಕಳವಾಗಿದೆ.

ಇದರಿಂದ ದಿಕ್ಕೇ ತೋಚದಂತಾಗಿ ಆಕೆ ಸುರತ್ಕಲ್‌ನ ಕಾಂತೇರಿ ದೈವಸ್ಥಾನದ ಬಳಿ ನಿಂತು ತನ್ನಲ್ಲಿದ್ದ ಚಿನ್ನ ಮಾರಾಟ ಮಾಡಲು ಯೋಚಿಸಿ ಅಂಗಡಿ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದ್ದಾಳೆ. ಆಗ ಯುವತಿಯ ನಡೆ ಬಗ್ಗೆ ಸಂಶಯ ಮೂಡಿ ಜನರು ವಿಚಾರಿಸಿದಾಗ ದಾರಿ ತಪ್ಪಿ ಬಂದಿರುವ ಶಂಕೆ ಮೂಡಿ ಸುರತ್ಕಲ್‌ ಪೊಲೀಸ್‌ ಠಾಣೆಗೆ ಕರೆತಂದು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

- Advertisement -

Latest News

error: Content is protected !!