Monday, June 8, 2026
Homeಕರಾವಳಿಉಡುಪಿಅಶ್ವಥ ಎಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಚಿತ್ರ ಮೂಡಿಸಿದ ಉಡುಪಿಯ ಕಲಾವಿದ

ಅಶ್ವಥ ಎಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಚಿತ್ರ ಮೂಡಿಸಿದ ಉಡುಪಿಯ ಕಲಾವಿದ

- Advertisement -
- Advertisement -

ಉಡುಪಿ: ಉಡುಪಿಯ ಕಲಾವಿದರೊಬ್ಬರು  ಸಿಎಂ ಸಿದ್ದರಾಮಯ್ಯ ಅವರ ಚಿತ್ರ ಮೂಡಿಸಿದ್ದಾರೆ. ಉಡುಪಿಯ ಪರ್ಕಳದ ಸಾಮಾಜಿಕ ಕಾರ್ಯಕರ್ತ ಹಾಗೂ ಹವ್ಯಾಸಿ ಕಲಾವಿದ ಗಣೇಶ್‌ ರಾಜ್ ಸರಳೇಬೆಟ್ಟು ಅವರು ಅಶ್ವಥ ಎಲೆಯಲ್ಲಿ ಸಿದ್ದರಾಮಯ್ಯ ಅವರ ಚಿತ್ರ ಬಿಡಿಸಿದ್ದಾರೆ.

ಬಾರಕೂರು ಸಮೀಪದ ಬೆಣ್ಣೆಕುದ್ರುನ ಕುಲಮಾಸ್ತಿ ಅಮ್ಮನವರ ದೇವಾಲಯದ ಆವರಣದಲ್ಲಿರುವ ಅಶ್ವಥ ಮರದ ಅತ್ಯಂತ ದೊಡ್ಡ ಗಾತ್ರದ ಎಲೆಯನ್ನು ಆಯ್ಕೆ ಮಾಡಿದ್ದು, ಅದನ್ನು 15 ದಿನಗಳ ಕಾಲ ನೀರಿನಲ್ಲಿ ನೆನೆಹಾಕಿ ಬಳಿಕ ಸ್ಟೆನ್ ಸಿಲ್‌ನಲ್ಲಿ ಕಪ್ಪು ಬಿಳುಪು ಬಣ್ಣ ಬಳಸಿ ಚಿತ್ರ ಮಾಡಿದ್ದಾರೆ. ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!