Sunday, June 7, 2026
Homeಕರಾವಳಿಉಡುಪಿಉಡುಪಿ: ಆಂಬ್ಯುಲೆನ್ಸ್ ಟೈಯರ್ ಸ್ಪೋಟಗೊಂಡು ಸೇತುವೆಗೆ ಡಿಕ್ಕಿ; ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ

ಉಡುಪಿ: ಆಂಬ್ಯುಲೆನ್ಸ್ ಟೈಯರ್ ಸ್ಪೋಟಗೊಂಡು ಸೇತುವೆಗೆ ಡಿಕ್ಕಿ; ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ

- Advertisement -
- Advertisement -

ಉಡುಪಿ:ಆಂಬ್ಯುಲೆನ್ಸ್ ನ ಟೈಯರ್ ಸ್ಪೋಟಗೊಂಡು ಅಪಘಾತಕ್ಕೀಡಾದ ಘಟನೆ ಬ್ರಹ್ಮಾವರ ತಾಲೂಕು ಮಾಬುಕಳ ಸೇತುವೆಯ ಬಳಿ ನಡೆದಿದೆ.

ಅನಾರೋಗ್ಯ ಪೀಡಿತ ಮಗುವನ್ನು ಉತ್ತರ ಕನ್ನಡ ಜಿಲ್ಲೆಯಿಂದ ಕರೆತರುತ್ತಿದ್ದ ವೇಳೆಯಲ್ಲಿ ಅಂಬ್ಯುಲೆನ್ಸ್ ನ ಟೈಯರ್ ಸ್ಪೋಟಗೊಂಡಿದ್ದು, ಇದರ ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿ ಅಂಬ್ಯುಲೆನ್ಸ್ ಸೇತುವೆಯ ಆವರಣ ಗೊಡೆಗೆ ಡಿಕ್ಕಿಯಾಗಿದೆ.ಇದರ ಪರಿಣಾಮ ಅಂಬ್ಯುಲೆನ್ಸ್ ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದು, ದೊಡ್ಡ ದುರಂತ ತಪ್ಪಿದಂತಾಗಿದೆ.

ಅಪಘಾತದಲ್ಲಿ ಆಂಬುಲೆನ್ಸ್ ನಲ್ಲಿ ಮಗುವನ್ನು‌ ಕರೆದೊಯ್ಯುತ್ತಿದ್ದ ಮಹಿಳೆಗೆ ಗಾಯಗಳಾಗಿದ್ದು, ಸ್ಥಳಕ್ಕೆ ಕೋಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!