Thursday, June 4, 2026
Homeಕರಾವಳಿಉಡುಪಿಉಡುಪಿ: ನಗರದ ಇಂದ್ರಾಳಿಯ ಮನೆಯಲ್ಲಿ ಆಕಸ್ಮಿಕ ಬೆಂಕಿ: ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ...

ಉಡುಪಿ: ನಗರದ ಇಂದ್ರಾಳಿಯ ಮನೆಯಲ್ಲಿ ಆಕಸ್ಮಿಕ ಬೆಂಕಿ: ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳ

- Advertisement -
- Advertisement -

ಉಡುಪಿ: ನಗರದ ಇಂದ್ರಾಳಿ ಬಳಿಯ ಬುಡ್ನಾರ್ ನ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿದೆ. ಬೆಳಗಿನ ಜಾವ 2 ಗಂಟೆಗೆ ಸುಮಾರಿಗೆ ಬೆಂಕಿ ಸಂಭವಿಸಿದ್ದು ತಕ್ಷಣ ಅಗ್ನಿ ಶಾಮಕ‌ ದಳದವರಿಗೆ ಸುದ್ದಿ ಮುಟ್ಟಿಸಲಾಯಿತು.

ಸುಮಾರು ಎರಡು ತಾಸು ಕಾರ್ಯಾಚರಣೆ ಮಾಡಿ ಬೆಂಕಿ ನಂದಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಅನ್ಸಾರ್ ಅಹಮದ್ ಸಹಿತ ಸ್ಥಳೀಯರು ಕಾರ್ಯಾಚರಣೆಗೆ ಸಹಕರಿಸಿದರು. ಇಲ್ಲಿನ ಮತ್ತಾಕ್ ಆಲಿ ಎಂಬವರ ಮನೆ ಇದಾಗಿದ್ದು ,ಅಗ್ನಿ ಅವಘಡದಿಂದ ಅಂದಾಜು  50 ಸಾವಿರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!