- Advertisement -
- Advertisement -
ಅಮ್ಟೂರು: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಕರ್ನಾಟಕ ಕೂಡ ತತ್ತರಿಸಿ ಹೋಗಿದ್ದು, ಈ ಸಂಧಿಗ್ದ ಸಮಯದಲ್ಲಿ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬ್ಲಾಕ್ ವ್ಯಾಪ್ತಿಯ ಅಮ್ಟೂರು ಗ್ರಾಮ ಪಂಚಾಯತ್ ನ ಜನತ ಕಾಲೋನಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಜನರಿಗೆ ಮಾಜಿ ಸಚಿವ ರಮಾನಾಥ ರೈಯವರ ನೇತೃತ್ವದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಎ.ಪಿ.ಎಮ್.ಸಿ ಅಧ್ಯಕ್ಷ ಪದ್ಮನಾಭ ರೈ, ಮಾಜಿ ತಾಲೂಕು ಪಂಚಾಯತ್ ಸಾಯಿ ಸಮಿತಿ ಅಧ್ಯಕ್ಷ ಹೈಡ ಸುರೇಶ್, ಪಂಚಾಯತ್ ಸದಸ್ಯ ವೇದಾವತಿ, ವಲಯ ಅಧ್ಯಕ್ಷ ರಾಘವ ಅಮ್ಟೂರು, ಜೋಸ್ಲಿನ್, ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ಅಮ್ಟೂರು ಉಪಸ್ಥಿತರಿದ್ದರು.
- Advertisement -