ಬಂಟ್ವಾಳ: ಕೊರೋನಾ ಹಾವಳಿಯಿಂದ ತಪ್ಪಿಸಲು ಹೇರಿದ್ದ ಪ್ರಥಮ ಹಂತದ ಲಾಕ್ ಡೌನ್ ಅವಧಿ ಇಂದಿಗೆ ಕೊನೆಯಾಗಿದ್ದು, ತಾಲೂಕಿನಲ್ಲಿ ಲಾಕ್ ಡೌನ್ ನಿಭಾಯಿಸುವಲ್ಲಿ ಶಾಸಕ ರಾಜೇಶ್ ನಾಯ್ಕ್, ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್. ಆರ್ ಮತ್ತು ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಕಳೆದ 21 ದಿನಗಳಿಂದ ನಿರಂತರವಾಗಿ ಲಾಕ್ ಡೌನ್ ಸಮಯದಲ್ಲಿ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಬಹಳ ಅಚ್ಚು ಕಟ್ಟಾಗಿ ಮಾಡಿದ ಕೀರ್ತಿ ರಾಜೇಶ್ ನಾಯ್ಕ್ ಮತ್ತು ರಶ್ಮಿ ಅವರಿಗೆ ಸಲ್ಲುತ್ತದೆ. ಕ್ವಾರಂಟೈನೆಲ್ಲಿರುವ ತಾಲೂಕಿನ ಗ್ರಾಮಗಳಿಲ್ಲದೆ ತಮ್ಮ ಕಾರ್ಯ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೂ ಬೇಟಿ ನೀಡಿದ್ದಾರೆ. ಜೊತೆಗೆ ಅಲ್ಲಿನ ಸಮಸ್ಯೆ ಗಳಿಗೆ ತಕ್ಷಣ ಸ್ಪಂದಿಸಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಮತ್ತು ದಾನಿಗಳ ಸಹಕಾರದೊಂದಿಗೆ ಆಹಾರ ಕಿಟ್ ವಿತರಣೆ ಮಾಡುವ ಕೆಲಸ ಕೂಡ ನಡೆದಿದೆ.
ಲಾಕ್ ಡೌನ್ ಅವಧಿಯಲ್ಲಿ ಬಿಸಿರೋಡು ಬಸ್ ನಿಲ್ದಾಣದಲ್ಲಿರುವ ನಿರಾಶ್ರಿತರು ಹಾಗೂ ಬಿಕ್ಷುಕರಿಗೆ ಸರಿಯಾದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಬರುತ್ತಿದೆಯಾ ಎಂದು ಸ್ವತಃ ಅವರೇ ಪರಿಶೀಲನೆ ನಡೆಸುತ್ತಿದ್ದಾರೆ.