Monday, May 13, 2024
Homeತಾಜಾ ಸುದ್ದಿಮಂಗಳೂರು: ಜೂನ್ 3, 4ರಂದು ರಾಮಕೃಷ್ಣ ಮಠದ ಅಮೃತ ಮಹೋತ್ಸವ

ಮಂಗಳೂರು: ಜೂನ್ 3, 4ರಂದು ರಾಮಕೃಷ್ಣ ಮಠದ ಅಮೃತ ಮಹೋತ್ಸವ

spot_img
- Advertisement -
- Advertisement -

ಮಂಗಳೂರು: ಮಂಗಳೂರಿನ ಶ್ರೀ ರಾಮಕೃಷ್ಣ ಮಠ ಜೂ.3ರಂದು 75 ಸಂವತ್ಸರಗಳನ್ನು ಪೂರ್ಣಗೊಳಿಸುತ್ತಿದ್ದು ಜೂನ್ 3, 4ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜೂ. 3ರಂದು ಬೆಳಗ್ಗೆ 8.15ಕ್ಕೆ ಮಂಗಳಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸ್ವಾಮಿ ಗೌತಮಾನಂದಜಿ ಮಹಾರಾಜ್ ಉಪಸ್ಥಿತಿಯಲ್ಲಿ ಸಾಧು, ಭಕ್ತರ ಶೋಭಾಯಾತ್ರೆ ಶ್ರೀಮಠದ ವರೆಗೆ ನಡೆಯಲಿದೆ. ಬಳಿಕ ಮಠದ ನೂತನ ಮಹಾದ್ವಾರ ಲೋಕಾರ್ಪಣೆ ಅಮೃತ ಸದನ ಉದ್ಘಾಟನೆಯಾಗಲಿದೆ ಎಂದರು.

ವಿವೇಕಾನಂದ ತರಬೇತಿ ಕೇಂದ್ರ ಅಮೃತ ಭವನ ಕಟ್ಟಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಡಿಗಲ್ಲು ಹಾಕಲಿದ್ದಾರೆ. ಉದ್ಯಮಿ ದಯಾನಂದ ಪೈ ಉಪಸ್ಥಿತರಿರುವರು. ಬೆಳಗ್ಗೆ 10ಕ್ಕೆ “ಅಮೃತ ಸಂಗಮ’ ರಾಜ್ಯಮಟ್ಟದ ಸಾಧು-ಭಕ್ತ ಸಮ್ಮೇಳನವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ.

ಸ್ವಾಮಿ ಮುಕ್ತಿದಾನಂದಜಿ ಹಾಗೂ ಸ್ವಾಮಿ ಜಿತಕಾಮಾನಂದಜಿ ಸಹಿತ ನಿಟ್ಟೆ ವಿ.ವಿ. ಕುಲಾಧಿಪತಿ ಎನ್. ವಿನಯ ಹೆಗ್ಡೆ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೇಯರ್ ಪ್ರೇಮಾನಂದ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.

ಅಮೃತ ಮಹೋತ್ಸವದ ಪ್ರಯುಕ್ತ ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎನ್. ರಾಜೇಂದ್ರ ಕುಮಾರ್ ಮಠಕ್ಕೆ ಹಸ್ತಾಂತರಿಸಲಿದ್ದಾರೆ ಎಂದರು. ಜೂ. 4ರಂದು ಸಂಜೆ 4.45ಕ್ಕೆ ಸಮಾರೋಪ ಜರಗಲಿದ್ದು, ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

- Advertisement -
spot_img

Latest News

error: Content is protected !!