Monday, June 8, 2026
Homeಪ್ರಮುಖ-ಸುದ್ದಿತಲಕಾವೇರಿಲ್ಲಿ ಇನ್ಮೇಲೆ ಬ್ರಾಹ್ಮಣರು ಪೂಜೆ ಸಲ್ಲಿಸೋದು ಬೇಡ, ನಾವೇ ಪೂಜೆ ಮಾಡ್ತೀವಿ, - ಡಿಸಿಗೆ ಅಮ್ಮ...

ತಲಕಾವೇರಿಲ್ಲಿ ಇನ್ಮೇಲೆ ಬ್ರಾಹ್ಮಣರು ಪೂಜೆ ಸಲ್ಲಿಸೋದು ಬೇಡ, ನಾವೇ ಪೂಜೆ ಮಾಡ್ತೀವಿ, – ಡಿಸಿಗೆ ಅಮ್ಮ ಕೊಡವರ ಬೇಡಿಕೆ

- Advertisement -
- Advertisement -

ಕೊಡಗು : ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕ ನಾರಾಯಣ ಆಚಾರ್ ಅವರು ಮೃತಪಟ್ಟಿದ್ದರು. ಇದಾದ ಬೆನ್ನಲ್ಲೇ ಪೂಜಾ ಕೈಂಕರ್ಯವನ್ನು ನಮಗೆ ನೀಡುವಂತೆ ಅಖಿಲ ಅಮ್ಮ ಕೊಡವ ಸಮಾಜ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

150 ವರ್ಷಗಳ ಹಿಂದೆ ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಅಮ್ಮ ಕೊಡವರು ಪೂಜೆ ನೆರವೇರಿಸುತಿದ್ದರು. ಕಾಲ ಬದಲಾದಂತೆ ಆ ಪೂಜಾ ಕೈಂಕರ್ಯವನ್ನು ಬ್ರಾಹ್ಮಣ ಅರ್ಚಕರು ನೆರವೇರಿಸಿಕೊಂಡು ಬಂದಿದ್ದರು. ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತಿದ್ದ ಅರ್ಚಕ ನಾರಾಯಣ ಆಚಾರ್ ಮತ್ತು ಅವರ ಕುಟುಂಬ ಭೂಕುಸಿತದಲ್ಲಿ ಮೃತಪಟ್ಟಿದೆ.

ಈಗ ತಲಕಾವೇರಿಯಲ್ಲಿ ಮತ್ತೆ ಪೂಜಾ ಕೈಂಕರ್ಯ ನೆರವೇರಿಸಲು ನಮಗೆ ಅವಕಾಶ ನೀಡಬೇಕು ಅಂತಾ ಅಖಿಲ ಅಮ್ಮಕೊಡವ ಸಮಾಜ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಅಮ್ಮಕೊಡವರು ಪೂಜೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಸಲ್ಲಿಸಿರುವುದರಲ್ಲಿ ನ್ಯಾಯವಿದೆ. ಅವರಿಗೆ ಅವಕಾಶ ಕೊಡುವುದರಲ್ಲಿ ತಪ್ಪಿಲ್ಲ ಎನ್ನೋದು ಅಮ್ಮಕೊಡವ ಮುಖಂಡರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!