Saturday, May 4, 2024
Homeಪ್ರಮುಖ-ಸುದ್ದಿಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದಾನೆಂದು ಕೊನೆಗೂ ಒಪ್ಪಿಕೊಂಡ ಪಾಕ್

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದಾನೆಂದು ಕೊನೆಗೂ ಒಪ್ಪಿಕೊಂಡ ಪಾಕ್

spot_img
- Advertisement -
- Advertisement -

ನವದೆಹಲಿ : ಭಾರತಕ್ಕೆ ಬೇಕಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ಇರುವುದನ್ನು ಕೊನೆಗೂ ಪಾಕಿಸ್ತಾನ ಅಧಿಕೃತವಾಗಿ ಒಪ್ಪಿಕೊಂಡಿದೆ. 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಪ್ರಮುಖ ನಗರ ಕರಾಚಿಯಲ್ಲಿ ಇದ್ದಾನೆ ಎಂದು ಭಾರತ ಹಲವು ವರ್ಷಗಳಿಂದ ವಾದಿಸುತ್ತಲೇ ಬಂದಿದ್ದರೂ ಪಾಕಿಸ್ತಾನ ನಿರಾಕರಿಸಿತ್ತು. ಇದೀಗ ಮೊದಲ ಬಾರಿ ನಮ್ಮ ದೇಶದಲ್ಲೇ ಇದ್ದಾನೆ ಎಂದು ಒಪ್ಪಿಕೊಂಡಿದೆ.

ಶನಿವಾರ ದೇಶದಲ್ಲಿರುವ 88 ಉಗ್ರರ ಪಟ್ಟಿ ಬಿಡುಗಡೆ ಮಾಡಿದ ಪಾಕಿಸ್ತಾನ, ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇರುವುದನ್ನು ಒಪ್ಪಿಕೊಂಡಿದೆ. ಪಾಕಿಸ್ತಾನದ ಕ್ಲಿಫ್ ಟೌನ್ ನ ಸೌದಿ ಮಸೀದಿ ಬಳಿಯ ವೈಟ್ ಹೌಸ್ ನಲ್ಲಿದ್ದಾನೆ. ಅಲ್ಲದೇ ಆತನಿಗೆ ಹಣಕಾಸಿನ ನೆರವನ್ನು ತಡೆ ಹಿಡಿದಿದೆ ಎಂದು ಹೇಳಿಕೊಂಡಿದೆ.

ದಾವೂದ್ ಅಲ್ಲದೆ ಹಫೀಜ್ ಸಯ್ಯದ್ ಸೇರಿದಂತೆ 88 ಉಗ್ರರಿಗೆ ಹಣಕಾಸಿನ ಸಹಾಯ ತಡೆ ಹಿಡಿಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಪಾಕಿಸ್ತಾನ ಉಗ್ರರಿಗೆ ನೆರವು ನೀಡುತ್ತಿರುವ ಹಿನ್ನೆಲೆಯಲ್ಲಿ ಸತತ 2 ವರ್ಷಗಳಿಂದ ಕಂದು ಪಟ್ಟಿಯಲ್ಲಿದೆ. ಕಪ್ಪುಪಟ್ಟಿಗೆ ಸೇರುವ ಒತ್ತಡದಲ್ಲಿರುವ ಪಾಕಿಸ್ತಾನ ಈಗ ನಿಜ ಒಪ್ಪಿಕೊಳ್ಳುವ ಪ್ರಯತ್ನ ಮಾಡಿದೆ.

- Advertisement -
spot_img

Latest News

error: Content is protected !!