Wednesday, June 3, 2026
Homeಕರಾವಳಿಉಡುಪಿಉಡುಪಿ: ಅಮಾಸೆಬೈಲು ಠಾಣಾ ಬಳಿ ಸಬ್ ಇನ್ಸ್ ಪೆಕ್ಟರ್ ಆತ್ಮಹತ್ಯೆ

ಉಡುಪಿ: ಅಮಾಸೆಬೈಲು ಠಾಣಾ ಬಳಿ ಸಬ್ ಇನ್ಸ್ ಪೆಕ್ಟರ್ ಆತ್ಮಹತ್ಯೆ

- Advertisement -
- Advertisement -

ಉಡುಪಿ: ಪೊಲೀಸ್ ಠಾಣೆಯಲ್ಲಿ ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾದ ಪೊಲೀಸರ ರಿಸರ್ವ್ ಸಬ್ ಇನ್ಸ್‌ಪೆಕ್ಟರ್ (ಆರ್‌ಎಸ್‌ಐ) ಒಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರದ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಲಬುರಗಿ ನೌರುಗುಂಜ್ ನಿವಾಸಿ ಮಲ್ಲಿಕಾರ್ಜುನ ಗುಬ್ಬಿ(56) ಆತ್ಮಹತ್ಯೆ ಮಾಡಿಕೊಂಡ ಎಆರ್‌ಎಸ್ಸೈ. ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ಕೆಎಸ್ ಆರ್‌ಪಿ ಘಟಕದಲ್ಲಿ ಎಆರ್‌ಎಸ್ಸೈಯಾಗಿದ್ದ ಇವರು, 15 ದಿನಗಳ ಪಾಳಿಯಲ್ಲಿ ಕಳೆದ 9-10 ವರ್ಷಗಳಿಂದ ಅಮಾಸೆಬೈಲು ನಕ್ಸಲ್ ನಿಗ್ರಹ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಲ್ಲಿಕಾರ್ಜುನ್ ಕಳೆದ 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

- Advertisement -

Latest News

error: Content is protected !!