Sunday, June 7, 2026
Homeತಾಜಾ ಸುದ್ದಿಚಿಕ್ಕಮಗಳೂರು: ಶಾಟ್೯ಸರ್ಕ್ಯೂಟ್ ನಿಂದ ಹೊತ್ತಿಹುರಿದ ಅಲ್ಟೋ ಕಾರು, ಚಾಲಕ ಸಜೀವ ದಹನ

ಚಿಕ್ಕಮಗಳೂರು: ಶಾಟ್೯ಸರ್ಕ್ಯೂಟ್ ನಿಂದ ಹೊತ್ತಿಹುರಿದ ಅಲ್ಟೋ ಕಾರು, ಚಾಲಕ ಸಜೀವ ದಹನ

- Advertisement -
- Advertisement -

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಸಮೀಪದ ವಸ್ತಾರೆ ಗ್ರಾಮದ ಬಳಿ ಶಾಟ್೯ಸರ್ಕ್ಯೂಟ್ ನಿಂದ ಅಲ್ಟೋ ಕಾರೊಂದು ಹೊತ್ತಿಹುರಿದು, ಕಾರಿನಲ್ಲಿದ್ದ ವ್ಯಕ್ತಿ ಕಾರಿನಲ್ಲೇ ಸಜೀವ ದಹನ ಆಗಿರುವ ಘಟನೆ ಇಂದು ನಡೆದಿದೆ.

ಮೃತರನ್ನು ಅರೆನೂರು ಗ್ರಾಮದ ನಿವಾಸಿ ರಘು ಎಂದು ತಿಳಿದು ಬಂದಿದ್ದು, ಕಾರಿನಲ್ಲಿ ಇವರೊಬ್ಬರೇ ಪ್ರಯಾಣಿಸುತ್ತಿದ್ದರು.

ಚಿಕ್ಕಮಗಳೂರಿಗೆ ಹೋಗಿ ಆಲ್ದೂರಿಗೆ ಬರುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ರಸ್ತೆ ಸಂಪೂರ್ಣ ಟ್ರಾಫಿಕ್ ಜ್ಯಾಮ್ ಆಗಿತ್ತು. ನಂತರ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಕಾರಿನಲಿದ್ದ ಮೃತದೇಹವನ್ನು ಹೊರತೆಗೆದು ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು

ಮೃತ ರಘು, ಕಾಫಿ ಟಿಂಬರ್ ವ್ಯಾಪಾರ ಮಾಡುತ್ತಿದ್ದರು ಸ್ಥಳಕ್ಕೆ ಆಲ್ದೂರು ಪಿಎಸ್ಐ ಶಿವರುದ್ರಮ್ಮ ಹಾಗು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

Latest News

error: Content is protected !!