Wednesday, June 3, 2026
Homeಕರಾವಳಿಪುತ್ತೂರು; ಓದುವ  ವಿಚಾರಕ್ಕೆ ಶಿಕ್ಷಕರಿಂದ ಒತ್ತಡ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಪುತ್ತೂರು; ಓದುವ  ವಿಚಾರಕ್ಕೆ ಶಿಕ್ಷಕರಿಂದ ಒತ್ತಡ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

- Advertisement -
- Advertisement -

ಪುತ್ತೂರು; ಓದುವ  ವಿಚಾರಕ್ಕೆ ಶಿಕ್ಷಕರು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಕಲ್ಲೇರಿ ಮೂಲದ, ಸದ್ಯ ಪಡೀಲಿನಲ್ಲಿದ್ದು ಪುತ್ತೂರು ನಗರದ ಸರಕಾರಿ ಪ್ರೌಢಶಾಲೆಯೊಂದರಲ್ಲಿ ಹತ್ತನೆ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಶಾಲೆ ನಿರಂತರವಾಗಿ ಶೇ. 100 ಫಲಿತಾಂಶ ಪಡೆಯುತ್ತಿದೆ. ನಿಮ್ಮ ಪುತ್ರಿ ಸರಿಯಾಗಿ ಕಲಿಯುತ್ತಿಲ್ಲ. ಇದರಿಂದ ಶಾಲಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ದೂರವಾಣಿ ಮೂಲಕ ಶಿಕ್ಷಕರು ಹೇಳುತ್ತಿದ್ದರು ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಪ್ರತಿದಿನ ಮಗಳಿಗೆ ಒಂದಲ್ಲ ಒಂದು ಕಾರಣ ನೀಡಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ವಿದ್ಯಾರ್ಥಿನಿಯ ತಂದೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ  ವಿದ್ಯಾರ್ಥಿನಿಯು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ. 


- Advertisement -

Latest News

error: Content is protected !!