Thursday, June 4, 2026
Homeಕರಾವಳಿಉಡುಪಿಪಡುಬಿದ್ರಿ: ಕುಡಿದ ಮತ್ತಲ್ಲಿ ಬಿದ್ದು ಮೃತಪಟ್ಟ ಅಕ್ಕಸಾಲಿಗ

ಪಡುಬಿದ್ರಿ: ಕುಡಿದ ಮತ್ತಲ್ಲಿ ಬಿದ್ದು ಮೃತಪಟ್ಟ ಅಕ್ಕಸಾಲಿಗ

- Advertisement -
- Advertisement -

ಪಡುಬಿದ್ರಿ: ವ್ಯಕ್ತಿಯೊಬ್ಬರು ಕುಡಿದ ಮತ್ತಲ್ಲಿ ಬಿದ್ದು, ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕಾಪು ತಾಲೂಕಿನ ನಚ್ಛಾಲು ಗ್ರಾಮದಲ್ಲಿ ನಡೆದಿದೆ. ಹರಿಶ್ಚಂದ್ರ ಆಚಾರ್ಯ ಮೃತಪಟ್ಟವರು.  ಅಕ್ಕಸಾಲಿಗನಾಗಿದ್ದ ಇವರು ರೂಂ ಬಾಡಿಗೆಗೆ ಪಡೆದು ಚಿನ್ನ ಬೆಳ್ಳಿ ಕೆಲಸ ಮಾಡಿಕೊಂಡಿದ್ರು.

ವಿಪರೀತ ಮದ್ಯದ ಚಟ ಹೊಂದಿದ್ದ ಹರಿಶ್ಚಂದ್ರ ಆಚಾರ್ಯ ಬಾಡಿಗೆ ರೂಂನಲ್ಲಿಯೇ ಕುಡಿದ ಮತ್ತಲ್ಲಿ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಪತ್ನಿ ಮಾಲಿನಿ ಎಚ್ ಆಚಾರ್ಯ ಅವರು ನೀಡಿದ ಮಾಹಿತಿಯಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!