Thursday, August 20, 2026
Homeಕರಾವಳಿ ಭೂಸೇನೆಯ ಲೆಫ್ಟಿನೆಂಟ್‌ ಆಗಿ ಸುಬ್ರಹ್ಮಣ್ಯದ ಅಜಿತೇಶ್‌ ಪಿ.ಎಸ್‌. ಪೆರ್ಮುಖ ನೇಮಕ

 ಭೂಸೇನೆಯ ಲೆಫ್ಟಿನೆಂಟ್‌ ಆಗಿ ಸುಬ್ರಹ್ಮಣ್ಯದ ಅಜಿತೇಶ್‌ ಪಿ.ಎಸ್‌. ಪೆರ್ಮುಖ ನೇಮಕ

- Advertisement -
- Advertisement -

 ಸುಬ್ರಮಣ್ಯ: ಭೂಸೇನೆಯ ಲೆಫ್ಟಿನೆಂಟ್‌ ಆಗಿ ಸುಬ್ರಹ್ಮಣ್ಯ ಗ್ರಾಮದ ನೂಚಿಲ ನಿವಾಸಿ ಅಜಿತೇಶ್‌ ಪಿ.ಎಸ್‌. ಪೆರ್ಮುಖ ಅವರು ನೇಮಕವಾಗಿದ್ದಾರೆ.

ಅಜಿತೇಶ್ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕುಮಾರಸ್ವಾಮಿ ವಿದ್ಯಾಲಯದಲ್ಲಿ, ಪಿಯುಸಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ, ಬಿಎಸ್ಸಿ ಪದವಿಯನ್ನು ಪೊನ್ನಂಪೇಟೆ ಕಾಲೇಜಿನಲ್ಲಿ ಪಡೆದ ಬಳಿಕ ಡೆಹ್ರಾಡೂನ್‌ನ ಫಾರೆಸ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂ ಟ್‌ನಲ್ಲಿ ದ್ವಿತೀಯ ಎಂಎಸ್ಸಿ ಪದವಿ ಪಡೆದಿದ್ದರು.

ಇವರು  ನಿವೃತ್ತ ಮುಖ್ಯ ಶಿಕ್ಷಕ ಶ್ರೀಕೃಷ್ಣ ಶರ್ಮ ಪಿ. ಅವರ ಪುತ್ರ. ಕಳೆದ ವರ್ಷ ನಡೆದ ಭೂಸೇನೆ ನೇಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಚೆನ್ನೈನ ಇಂಡಿಯನ್‌ ಆರ್ಮಿ ಆಫೀಸರ್ಸ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಆಫಿಸರ್ಸ್‌ ಟ್ರೈನಿಂಗ್‌ ಪಡೆದಿದ್ದರು. ಅಜಿತೇಶ್‌ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ವಿದ್ಯಾರತ್ನ ಹಾಗೂ ಗೋಪಾಲಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀಕೃಷ್ಣ ಶರ್ಮ ಪಿ. ಅವರ ಪುತ್ರ. 

- Advertisement -

Latest News

error: Content is protected !!