Thursday, June 4, 2026
Homeಕರಾವಳಿಕಡಬ; ಮನೆ ಮಂದಿ ಆಸ್ಪತ್ರೆಗೆ ಹೋಗಿದ್ದಾಗ ಮನೆಗೆ ನುಗ್ಗಿ ಕಳ್ಳತನ

ಕಡಬ; ಮನೆ ಮಂದಿ ಆಸ್ಪತ್ರೆಗೆ ಹೋಗಿದ್ದಾಗ ಮನೆಗೆ ನುಗ್ಗಿ ಕಳ್ಳತನ

- Advertisement -
- Advertisement -

ಕಡಬ; ಮನೆ ಮಂದಿ ಆಸ್ಪತ್ರೆಗೆ ಹೋಗಿದ್ದಾಗ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಗೋಳಿತ್ತಡಿಯಲ್ಲಿ ನಡೆದಿದೆ.

ಗೋಳಿತ್ತಡಿಯ ನೆಬಿಸಾ ಎಂಬವರು ತನ್ನ ಮಗಳ ಹೆರಿಗೆ ಹಿನ್ನೆಲೆ ಅಳಿಯನ ಜೊತೆ ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದರು.ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ಮನೆಯಲ್ಲಿ ಯಾರೂ ಇರಲಿಲ್ಲ.

ಮಾ.11ರಂದು ( ಇಂದು)  ಮನೆಗೆ ಬಂದಾಗ ಸಂಜೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯ ದ ಚಿನ್ನ ಹಾಗೂ ನಗದು ಕಳವಾಗಿದ್ದು, ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!