ಬೆಳ್ತಂಗಡಿ: ಬಂದಾರು, ಮೈರೋಳ್ತಡ್ಕ, ಪೆರ್ಲ -ಬೈಪಾಡಿ, ಕುಂಟಾಲಪಲ್ಕೆ, ಸವಣಾಲು, ಬಂಗಾಡಿ ಆಸು ಪಾಸು ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು, ಈ ಸಮಸ್ಯೆಗಳ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂದಾರು ಗ್ರಾಮದ ಮೈರೋಳ್ತಡ್ಕ, ಪಾಣೆಕಲ್ಲುನಲ್ಲಿ, ಮೈರೋಳ್ತಡ್ಕ, ಪಾಣೆಕಲ್ಲು,ಕುಂಟಾಲಪಲ್ಕೆ ಹಾಗೂ ಮೊಗ್ರು ಗ್ರಾಮದ ಮುರ ಪ್ರದೇಶಗಳಲ್ಲಿ ಎರ್ಟೆಲ್ ಟವರ್ ಹಾಗೂ ಬಿ ಎಸ್.ನ್ ಲ್ ಟವರ್ ಇದ್ದರು ಕೂಡ ಈ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ, ವರ್ಕ್ ಫ್ರಮ್ ಹೋಂ ಉದ್ಯೋಗಿಗಳಿಗೆ, ದೈನದಿಂದ ವ್ಯವಹಾರ, ಶಾಲೆ, ಹಾಗೂ ಸಂಸ್ಥೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಸರಿಯಾಗಿ ಡಾಟಾ ಸಿಗೋದಿಲ್ಲ. ಹಾಗೆಯೇ ಕಾಲ್ ನಲ್ಲಿ ಮಾತಾಡೋಕು ಆಗೋದಿಲ್ಲ ತುಂಬಾ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ಅಧಿಕಾರಿಗಳಿಗೆ ತಿಳಿಸಿದರು ಕ್ಯಾರೇ ಅನ್ನುತ್ತಿಲ್ಲ. ಯಾರಿಗೇಳೋಣ ನಮ್ಮ ಪ್ರಾಬ್ಲಮ್ ಅನ್ನುವ ಆಗಿದೆ ಅನ್ನುತ್ತಿದ್ದಾರೆ ಆ ಭಾಗದ ನಾಗರಿಕರು.
ಇನ್ನು ಆದಷ್ಟು ಬೇಗ ನೆಟ್ವರ್ಕ್ ಸಮಸ್ಯೆ ಸರಿ ಮಾಡದೇ ಇದ್ದಲ್ಲಿ ಪ್ರತಿಭಟನೆ ಮಾಡುವ ಬಗ್ಗೆ ನಾಗರಿಕರ ತೀರ್ಮಾನಿಸಿದ್ದಾರೆ ಅನ್ನೋದು ವರದಿಯಾಗಿದೆ.
ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗಲಿ ಎಂಬುದೇ ನಾಗರಿಕರ ಒಕ್ಕೊರಲ ಆಗ್ರಹವಾಗಿದೆ.


