Thursday, June 4, 2026
Homeಕರಾವಳಿಬಂಟ್ವಾಳ: ಗಾಂಜಾ ಕೇಸ್ ನಲ್ಲಿ ಕೋರ್ಟ್ ಗೆ 8 ವರ್ಷಗಳಿಂದ  ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾತನ ಬಂಧನ

ಬಂಟ್ವಾಳ: ಗಾಂಜಾ ಕೇಸ್ ನಲ್ಲಿ ಕೋರ್ಟ್ ಗೆ 8 ವರ್ಷಗಳಿಂದ  ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾತನ ಬಂಧನ

- Advertisement -
- Advertisement -

ಬಂಟ್ವಾಳ: ಗಾಂಜಾ ಕೇಸ್  ನಲ್ಲಿ  ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗಿ ಎಂಟು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದಾತನ್ನು  ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.ಮಂಗಳೂರು ಕೊಟೆಕಾರ್ ಮಜಲು ನಿವಾಸಿ ಸಿದ್ದೀಕ್ ಬಂಧಿತ ಆರೋಪಿ.

ಅರೋಪಿ ಸಿದ್ದೀಕ್ ಅವರು 2015 ರ ಡಿಸೆಂಬರ್ ನಲ್ಲಿ ಸಾರ್ವಜನಿಕ ಸ್ಥಳವೊಂದರಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಈತನ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.ಷರತ್ತು ಬದ್ದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಸಿದ್ದೀಕ್ ಅ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಜುಲೈ 1 ರಂದು ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ಹಾಗೂ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಎಂ ಆರ್ ಹಾಗೂ ಅಕ್ಷಯ್ ಡವಗಿ, ಸಂಜೀವ ಕೆ , ಭಾರತಿ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹೆಚ್ ಸಿ ಗಣೇಶ ಪ್ರಸಾದ್ ಪಿ ಸಿ ಯೋಗೇಶ್ ಡಿ ಎಲ್ ಹಾಗೂ ವಿಜಯ್ ರವರು ಮಾಹಿತಿ ಸಂಗ್ರಹಿಸಿ ಕೇರಳ ಗಡಿ ಭಾಗದ ತಲಪಾಡಿ ಎಂಬಲ್ಲಿ ದಸ್ತಗಿರಿ ಮಾಡಿಕೊಂಡು ಬಂದು ನಿನ್ನೆ ನ್ಯಾಯಾಲಯಕ್ಕೆ ಹಾಜರು‌ ಪಡಿಸಿದ್ದಾರೆ.ನ್ಯಾಯಾಲಯವು ಆರೋಪಿ ಸಿದ್ದೀಕ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ

- Advertisement -

Latest News

error: Content is protected !!