- Advertisement -
![]()
- Advertisement -
ಮಂಗಳೂರು: ರಾಜಕೀಯ ದ್ವೇಷದ ಹಿನ್ನಲೆಯಿಂದ ಅಡ್ಯಾರ್ ಗ್ರಾಮ ಪಂಚಾಯತಿ ಸದಸ್ಯ ಯಾಕೂಬ್ ಮೇಲೆ ತಂಡವೊಂದು ದಾಳಿ ನಡೆಸಿ ಹತ್ಯೆ ಮಾಡಿದೆ.
ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ನಿನ್ನೆ ಸಂಜೆ ಅಡ್ಯಾರ್ ಸಮೀಪ ತಂಡವೊಂದು ಅಡ್ಯಾರ್ ಪದವು ನಿವಾಸಿ ಯಾಕೂಬ್(45) ಜೊತೆ ಹಳೆ ದ್ವೇಷದ ಕಾರಣದಿಂದ ಜಗಳಕ್ಕಿಳಿದಿದೆ.
ಜಗಳ ತಾರಕಕ್ಕೇರಿ ಯಾಕೂಬ್ ರ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಕೂಡಲೇ ರಿಕ್ಷಾದಲ್ಲಿ ಹೈ ಲ್ಯಾಂಡ್ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಯಾಕೂಬ್ ಅಡ್ಯಾರ್ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.
- Advertisement -


