Monday, May 6, 2024
Homeಮನರಂಜನೆಸರಳವಾಗಿ ಮಗಳ ಬರ್ತಡೇ ಆಚರಿಸಿದ ನಟಿ ಶ್ವೇತಾ ಶ್ರೀವಾತ್ಸವ್

ಸರಳವಾಗಿ ಮಗಳ ಬರ್ತಡೇ ಆಚರಿಸಿದ ನಟಿ ಶ್ವೇತಾ ಶ್ರೀವಾತ್ಸವ್

spot_img
- Advertisement -
- Advertisement -

ಬೆಂಗಳೂರು : ನಟಿ ಶ್ವೇತಾ ಶ್ರೀವಾತ್ಸವ್ ಮಗಳು ಅಶ್ಮಿತಾ ಶ್ರೀವಾತ್ಸವ್ ಕೂಡ ಅಮ್ಮನಂತೆ ಸಿಕ್ಕಾಪಟ್ಟೆ ಫೇಮಸ್. ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿದ್ದಾಳೆ ಅಶ್ಮಿತಾ. ಇವತ್ತು ಅಶ್ಮಿತಾಗೆ ಮೂರನೇ ವರ್ಷದ ಹುಟ್ಟಹಬ್ಬದ ಸಂಭ್ರಮ. ಹಾಗಾಗಿ ಶ್ವೇತಾ ಅವರು ಅತ್ಯಂತ ಸರಳವಾಗಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ರು. ಮಗಳಿಗಾಗಿ ಸ್ಪೆಷಲ್ ಕೇನ್ನು ಆರ್ಡರ್ ಮಾಡಿದ್ದರು ಶ್ವೇತಾ. ಆ ಕೇಕ್ ಕತ್ತರಿಸಿ, ದೀಪವನ್ನು ಬೆಳಗೋದರ ಮೂಲಕ ಮಗಳ ಬರ್ತಡೇ ಸೆಲೆಬ್ರೇಟ್ ಮಾಡಿದ್ದಾರೆ. ಇನ್ನು ಈ ಸುಂದರ ಕ್ಷಣಗಳ ವಿಡಿಯೋವನ್ನು ಶ್ವೇತಾ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ.

Thank you for choosing us , my dear ?!! We are so blessed to have you in our lives!! Many many happy returns of the day…

Posted by Shwetha Srivatsav on Tuesday, 21 July 2020

ಇನ್ನು ಮೊನ್ನೆಯೇ ಶ್ವೇತಾ ಅಭಿಮಾನಿಗಳ ಬಳಿ ಮನವಿಯೊಂದನ್ನು ಮಾಡಿಕೊಂಡಿದ್ದರು. ಅಭಿಮಾನಿಗಳು ಕೊರೊನಾದ ಈ ಸಂಕಷ್ಟದ ಸಮಯದಲ್ಲಿ ನನ್ನ ಮಗಳಿಗಾಗಿ ಗಿಫ್ಟ್ ಕಳುಹಿಸಬೇಡಿ. ಮನೆ ಬಳಿ ಬರಬೇಡಿ. ಬದಲಾಗಿ ಅದೇ ಹಣವನ್ನು ನಿಮಗೆ ಇಷ್ಟವಿದ್ದರೆ ಅನಾಥಾಶ್ರಮದ ಮಕ್ಕಳಿಗೋ ಇಲ್ಲಾ ಇನ್ನ್ಯಾರಿಗೆ ಅಗತ್ಯವಿದೆಯೋ ಅವರಿಗಾಗಿ ವಿನಿಯೋಗಿಸಿ ಎಂದಿದ್ದರು. ಹಾಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ಅಶ್ಮಿತಾಗೆ ಶುಭ ಹಾರೈಸುತ್ತಿದ್ದಾರೆ. ಶ್ವೇತಾ ಅವರು ಕೂಡ ಹೇಳಿದಂತೆ ಅತ್ಯಂತ ಸರಳವಾಗಿಯೇ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾಕರೆ.

- Advertisement -
spot_img

Latest News

error: Content is protected !!