Wednesday, June 3, 2026
Homeಕರಾವಳಿಕಟೀಲು ಮತ್ತು ಮುಂಡ್ಕೂರು ಕ್ಷೇತ್ರಕ್ಕೆ ನಟ ವಿಜಯ ರಾಘವೇಂದ್ರ ಭೇಟಿ: ಕಾಣಿಕೆ ಸಮರ್ಪಣೆ

ಕಟೀಲು ಮತ್ತು ಮುಂಡ್ಕೂರು ಕ್ಷೇತ್ರಕ್ಕೆ ನಟ ವಿಜಯ ರಾಘವೇಂದ್ರ ಭೇಟಿ: ಕಾಣಿಕೆ ಸಮರ್ಪಣೆ

- Advertisement -
- Advertisement -

ಮೂಲ್ಕಿ: ಪುರಾಣ ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಖ್ಯಾತ ಚಿತ್ರನಟ ಚಿನ್ನಾರಿ ಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಅವರು ಕುಟುಂಬ ಸಹಿತ ಇಂದು ಭೇಟಿ ನೀಡಿ, ಸೀರೆ ಕಾಣಿಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ದೇಗುಲಕ್ಕೆ ಬಂದಿದ್ದ ಭಕ್ತರು, ಶಾಲಾ ವಿದ್ಯಾರ್ಥಿಗಳು ವಿಜಯ ರಾಘವೇಂದ್ರ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಬಳಿಕ ಅವರು ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಂಪ್ರೋಕ್ಷಣೆಯ ದಿನವಾದ ಇಂದು ವಿಜಯ ರಾಘವೇಂದ್ರ ಅವರು ಪತ್ನಿ ಮತ್ತು ಪುತ್ರನ ಜೊತೆ ದೇವಳಕ್ಕೆ ಆಗಮಿಸಿದರು.

ದುರ್ಗಾಪರಮೇಶ್ವರೀ ಹಾಗೂ ಪರಿವಾರ ಸಾನಿಧ್ಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಟ ವಿಜಯ ರಾಘವೇಂದ್ರ ಮುಂಡ್ಕೂರು ಕ್ಷೇತ್ರದ ಭೇಟಿ ಮಾಡಲು ಬಹಳ ದಿನಗಳಿಂದ ಕಾಯುತ್ತಿದ್ದೆ, ಇಂದು ಜಾತ್ರಾ ಮಹೋತ್ಸವದ ಸಂಪ್ರೋಕ್ಷಣೆಯಂದೇ ದೇವರ ದರ್ಶನಕ್ಕೆ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.

- Advertisement -

Latest News

error: Content is protected !!