Sunday, May 19, 2024
Homeಕರಾವಳಿಕಡಬದಲ್ಲಿ ಅಪ್ರಾಪ್ತೆ ಮೇಲೆ ಸ್ವಂತ ಅಣ್ಣ ಹಾಗೂ ದೊಡ್ಡಪ್ಪನಿಂದ ಅತ್ಯಾಚಾರ: ಆರೋಪಿಗಳನ್ನು ಬಂಧಿಸಿದ ಪೊಲೀಸರು

ಕಡಬದಲ್ಲಿ ಅಪ್ರಾಪ್ತೆ ಮೇಲೆ ಸ್ವಂತ ಅಣ್ಣ ಹಾಗೂ ದೊಡ್ಡಪ್ಪನಿಂದ ಅತ್ಯಾಚಾರ: ಆರೋಪಿಗಳನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

ಕಡಬ: ಅಪ್ರಾಪ್ತ ಬಾಲಕಿಯ ಮೇಲೆ ಸ್ವಂತ ಅಣ್ಣ ಹಾಗೂ ದೊಡ್ಡಪ್ಪನೇ ಅತ್ಯಾಚಾರ ಎಸಗಿರುವ ಘಟನೆ ಕಡಬದಲ್ಲಿ ನಡೆದಿದೆ.

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ನಿವಾಸಿ ಅಪ್ರಾಪ್ತ ಬಾಲಕಿಯ ಮೇಲೆ ಸ್ವಂತ ಅಣ್ಣನೇ ಅತ್ಯಾಚಾರ ನಡೆಸಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಅತ್ಯಾಚಾರವೆಸಗಿರೋದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು ಆರೋಪಿಗಳಾದ ಅಪ್ರಾಪ್ತೆಯ ಅಣ್ಣ ಹಾಗೂ ದೊಡ್ಡಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

- Advertisement -
spot_img

Latest News

error: Content is protected !!