Wednesday, June 3, 2026
Homeತಾಜಾ ಸುದ್ದಿಲೈವ್ ವಿಡಿಯೋ ಕಾನ್ಫರೆನ್ಸ್ ಸಮಯದಲ್ಲೇ ಪತಿಯ ಮೇಲೆ ಪ್ರೀತಿ ಹುಟ್ಟೋದಾ? ಕಿಸ್‌ ಕೊಡಲು ಹೋಗಿ ವೈರಲ್...

ಲೈವ್ ವಿಡಿಯೋ ಕಾನ್ಫರೆನ್ಸ್ ಸಮಯದಲ್ಲೇ ಪತಿಯ ಮೇಲೆ ಪ್ರೀತಿ ಹುಟ್ಟೋದಾ? ಕಿಸ್‌ ಕೊಡಲು ಹೋಗಿ ವೈರಲ್ ಆದ ಪತ್ನಿ..!

- Advertisement -
- Advertisement -

ನವದೆಹಲಿ: ಝೂಮ್‌ ಮೀಟಿಂಗ್‌ ಸಂದರ್ಭದಲ್ಲಿ ಲೈವ್‌ನಲ್ಲಿ ಇರುವಾಗಲೇ ಪತ್ನಿಯೊಬ್ಬಳು ಗಂಡನಿಗೆ ಕಿಸ್‌ ಕೊಡಲು ಹೋಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೈಗಾರಿಕೋದ್ಯಮಿಯೊಬ್ಬರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡುತ್ತ ಭಾರತದ ಜಿಡಿಪಿ ಕುರಿತು ಗಂಭೀರ ಉಪನ್ಯಾಸ ನೀಡುತ್ತಿರುತ್ತಾರೆ. ಅಷ್ಟರಲ್ಲಿ ಅವರ ಪತ್ನಿ ದೃಶ್ಯದಲ್ಲಿ ಕಾಣಿಸಿಕೊಂಡು, ಪತಿಯನ್ನು ಚುಂಬಿಸಲು ಮುಂದಾಗುತ್ತಾರೆ. ಇದರಿಂದ ಗಾಬರಿಗೊಂಡ ಆತ… ಕ್ಯಾಮೆರಾ ಆನ್ ನಲ್ಲಿದೆ.. ಪಾಗಲ್, ವಾಟ್ ನಾನ್ ಸೆನ್ಸ್ ಎಂದು ಹುಸಿ ಕೋಪ ಪ್ರದರ್ಶಿಸುತ್ತಾರೆ.

ಇದರಿಂದ ಕೂಡಲೇ ಹಿಂದೆ ಸರಿದ ಪತ್ನಿ.. ‘ಸರಿ ಸರಿ ಮೀಟಿಂಗ್ ಎಂದು ಆಕೆ ಮುಸಿ ಮುಸಿ ನಗುತ್ತಾರೆ. ಇವೆಲ್ಲವೂ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವು ಕಾರಣ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟಿಜನ್‌ಗಳು ‘ಅಬ್ಬಾ..! ಪತಿ ಎಂದರೆ ಆಕೆಗೆ ಎಷ್ಟು ಪ್ರೀತಿ ಅಲ್ಲವೇ.. ಎಂದು ಕೆಲ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಏನೇ ಇರಲಿ ಕೊನೆಯಲ್ಲಿ… ಆಕೆಯ ನಗುವೇ ಹೈಲೈಟ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

- Advertisement -

Latest News

error: Content is protected !!