Sunday, June 7, 2026
Homeತಾಜಾ ಸುದ್ದಿಮನೆಯೂಟಕ್ಕಾಗಿ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ವಾಪಾಸ್ ಪಡೆದ ನಟ ದರ್ಶನ್

ಮನೆಯೂಟಕ್ಕಾಗಿ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ವಾಪಾಸ್ ಪಡೆದ ನಟ ದರ್ಶನ್

- Advertisement -
- Advertisement -

ಬೆಂಗಳೂರು: ಮನೆಯೂಟ ಮನವಿ ಮಾಡಿ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ನಟ ದರ್ಶನ್ ವಾಪಾಸ್ ಪಡೆದಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ರಾಜಾತಿಥ್ಯದ ಪೋಟೋ ವೈರಲ್ ಆಗುತ್ತಿದ್ದಂತೆ, ಕೆಲ ಜೈಲು ಅಧಿಕಾರಿಳನ್ನು ಅಮಾನತು ಮಾಡಲಾಗಿತ್ತು.ಅಲ್ಲದೇ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಈ ಹಿನ್ನಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಕಾರಣ, ನಟ ದರ್ಶನ್ ಪರ ವಕೀಲರು ಮನೆ ಊಟಕ್ಕಾಗಿ ಜೈಲು ಅಧಿಕಾರಿಗಳಿಗೆ ಸಲ್ಲಿಸಿದ್ದಂತ ಅರ್ಜಿಯನ್ನು ವಾಪಾಸ್ ಪಡೆದಿದ್ದಾರೆ.

ಅಂದಹಾಗೇ ಜೈಲು ಊಟ ಬೇಡ, ಮನೆ ಊಟ ಬೇಕು ಎಂಬುದಾಗಿ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಇಂದು ಅವರು ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಯಬೇಕಿತ್ತು. ಆದರೆ ಇಂದು ಅರ್ಜಿಯನ್ನು ವಾಪಾಸ್ ಪಡೆಯಲಾಗಿದೆ.

- Advertisement -

Latest News

error: Content is protected !!