- Advertisement -
- Advertisement -
ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗೋದಕ್ಕೆ ಅವರ ಆಪ್ತರಾದ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಇನ್ನು ಯಾಕೆ ಬಂದಿಲ್ಲ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ಅಭಿಷೇಕ್ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.
ಇಂದು ನಟ ಅಭಿಷೇಕ್ ಅಂಬರೀಶ್ , ನಟ ಚಿಕ್ಕಣ್ಣ ಹಾಗೂ ನಟ ಧನ್ವೀರ್ ಅವರು ಒಟ್ಟಿಗೆ ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಜೊತೆ ಮಾತನಾಡಿ ಅವರಿಗೆ ಧೈರ್ಯ ತುಂಬಿದ್ದಾರೆ. ಇನ್ನು ರೇಣುಕಾಸ್ವಾಮಿ ಕೊಲೆಯಾದ ದಿನ ಪಬ್ ನಲ್ಲಿ ದರ್ಶನ್ ಅವರ ಜೊತೆ ಚಿಕ್ಕಣ್ಣ ಅವರು ಕಾಣಿಸಿಕೊಂಡಿದ್ದರು. ಈ ಹಿನ್ನೆಲೆ ಈಗಾಗಾಲೇ ಚಿಕ್ಕಣ್ಣ ಅವರಿಗೆ ಪೊಲೀಸರು ನೋಟಿಸ್ ನೀಡಿ ಅವರನ್ನು ಕೂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಒಳಪಡಿಸಿದ್ರು.
- Advertisement -