Saturday, June 13, 2026
Homeತಾಜಾ ಸುದ್ದಿಆತ್ಮಹತ್ಯೆಗೆ ಶರಣಾದ ಬಾಲಿವುಡ್ ನ ಹೆಸರಾಂತ ನಟ

ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನ ಹೆಸರಾಂತ ನಟ

- Advertisement -
- Advertisement -

ಧರ್ಮಶಾಲಾ: 2020ರಲ್ಲಿ ಬಾಲಿವುಡ್ ಗೆ ಮತ್ತೊಂದು ಆಘಾತವಾಗಿದೆ. ಬಾಲಿವುಡ್ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಬಾಸ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ವಿಷ್ಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮೃತ ದೇಹವನ್ನು ವಶಕ್ಕೆ ಪಡೆದು ತನಿಖೆ ಶುರು ಮಾಡಿದ್ದಾರೆ. ನಟ ಆಸಿಫ್ ಬಸ್ರಾ ಕಳೆದ 5 ವರ್ಷಗಳಿಂದ ಮೆಕ್ಲಿಯೋಡ್‌ಗಂಜ್‌ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರೊಂದಿಗೆ ವಿದೇಶಿ ಗೆಳತಿಯೂ ಇದ್ದಳು ಎನ್ನಲಾಗಿದೆ.

ಆಸಿಫ್ ಬಾಸ್ರಾ ಯುಕೆ ಮೂಲದ ಮಹಿಳೆಯೊಂದಿಗೆ ಮೆಕ್ಲಿಯೋಡ್ ಗಂಜ್ನಲ್ಲಿ ಲಿವ್ ಇನ್ ನಲ್ಲಿದ್ದರು. ಗುರುವಾರ ಮಧ್ಯಾಹ್ನ ಅವರು ತಮ್ಮ ಸಾಕು ನಾಯಿ ಜೊತೆ ಹೊರಗೆ ಹೋಗಿದ್ದರು. ವಾಪಸ್ ಬಂದವರು ನೇಣಿಗೆ ಶರಣಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಖಿನ್ನತೆಗೆ ಬಲಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಆಸಿಫ್, ಕಿರುತೆರೆ ನಟರು. ಬಾಲಿವುಡ್ ನ ಕೆಲವು ಚಿತ್ರಗಳಲ್ಲೂ ನಟಿಸಿದ್ದಾರೆ. ತಮಿಳಿನ ಹಿಟ್ ಚಿತ್ರ ಅಂಜಾನ್ ನಲ್ಲೂ ನಟಿಸಿದ್ದರು, ಹಾಗೆಯೆ ಕೆಲ ಹಾಲಿವುಡ್ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

- Advertisement -

Latest News

error: Content is protected !!