Wednesday, June 24, 2026
Homeತಾಜಾ ಸುದ್ದಿಬಿಜೆಪಿಯವರಿಗೆ ಕಾರ್ಯಕರ್ತರೆಂದರೆ ಬಳಸಿ ಬಿಸಾಡೋ ಟೂಲ್ ಕಿಟ್: ಲಾಭವಿದ್ದರೆ ಅನಾಥ ಶವಕ್ಕೂ ಕೇಸರಿ ಶಾಲು ಹೊದಿಸುತ್ತಾರೆ:...

ಬಿಜೆಪಿಯವರಿಗೆ ಕಾರ್ಯಕರ್ತರೆಂದರೆ ಬಳಸಿ ಬಿಸಾಡೋ ಟೂಲ್ ಕಿಟ್: ಲಾಭವಿದ್ದರೆ ಅನಾಥ ಶವಕ್ಕೂ ಕೇಸರಿ ಶಾಲು ಹೊದಿಸುತ್ತಾರೆ: ಸರಣಿ ಟ್ವೀಟ್‌ ಮೂಲಕ ಕಾಂಗ್ರೆಸ್‌ ಟೀಕೆ

- Advertisement -
- Advertisement -

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ರಾಜಕೀಯ ಯರಂಗದಲ್ಲಿ ಭಾರಿ ಸಂಚಲನವನ್ನೇ ಉಂಟು ಮಾಡಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಕ್ಕೂ ಇದು ಕಾರಣವೇ ಆಗಿದೆ. ಅದರ ಪರಿಣಾಮ ಈಗ ಬಿಜೆಪಿಯನ್ನ ಕಾಂಗ್ರೆಸ್ ಟೀಕಿಸುತ್ತಲೇ ಇದೆ.

ಬಿಜೆಪಿಗೆ ತಮ್ಮ ಪಕ್ಷದ ಕಾರ್ಯಕರ್ತರು ಅಂದ್ರೆ, ಬಳಸಿ ಬೀಸಾಡೋ ಟೂಲ್ ಕಿಟ್ ಅಂತಲೇ ಕಾಂಗ್ರೆಸ್ ಪಕ್ಷ ಟೀಕೆ ಮಾಡುತ್ತಿದೆ. ಟ್ವಿಟರ್ ಮೂಲಕ ಸರಣಿ ಟ್ವೀಟ್ ಮಾಡಿರೋ ಕರ್ನಾಟಕ ಕಾಂಗ್ರೆಸ್ ಮನಸೋಯಿಚ್ಛೆ ಬಿಜೆಪಿಯನ್ನ ಟೀಕಿಸುತ್ತಲೇ ಇದೆ.

ಬಿಜೆಪಿಯವರು ಲಾಭವಿದ್ದರೇ ಮಾತ್ರ ಅನಾಥ ಶವಕ್ಕೂ ಕೇಸರಿ ಶಾಲು ಹೊದಿಸುತ್ತಾರೆ. ಇವ ನಮ್ಮವ ಅಂತಲೂ ಹೇಳಿ ಬಿಡ್ತಾರೆ. ಲಾಭ ಇಲ್ಲ ಅನ್ಕೋಳಿ, ಆಗ ತಾವೇ ಕೇಸರಿ ಶಾಲು ಹೊದ್ದು ಇವನು ನಮ್ಮವನ್ನಲ್ಲ ಅಂತಲೇ ಹೇಳಿ ಬಿಡ್ತಾರೆ. ವಿಜಯ್ ಗಾಣಿಗ,ವಿನಾಯಕ ಬಾಳಿಗಾ ಸೇರಿದಂತೆ ಇನ್ನೂ ಅನೇಕರು ಬಿಜೆಪಿ ಬಳಸಿ ಬಿಸಾಡಿದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಅಂತಲೇ ಕಾಂಗ್ರೆಸ್ ಟೀಕೆ ಮಾಡಿದೆ.

- Advertisement -

Latest News

error: Content is protected !!