Sunday, June 29, 2025
Homeಕರಾವಳಿಉಡುಪಿಕಾರ್ಕಳ: 34 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕಾರ್ಕಳ: 34 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

spot_img
- Advertisement -
- Advertisement -

ಕಾರ್ಕಳ: 34 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ತೆಂಕ ಎಡಪದವಿನ ಲಿಯೋ ರೋಚ್ (64)  ಬಂಧಿತ ಆರೋಪಿ,

ಈತನ ವಿರುದ್ಧ 2004ರಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 34 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈತನ ಮೇಲೆ ನ್ಯಾಯಾಲಯವು LPC ವಾರೆಂಟ್ ಹೊರಡಿಸಿತ್ತು.

ಎ.ಎಸ್.ಪಿ ಕಾರ್ಕಳ ಹರ್ಷ ಪ್ರಿಯವಂದಾ ರವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಮಂಜಪ್ಪ ಡಿ ಹಾಗೂ ಕಾರ್ಕಳ ನಗರ ಠಾಣಾ ಪಿಎಸ್ಐಗಳಾದ ಸಂದೀಪ್ ಕುಮಾರ್ ಶೆಟ್ಟಿ ಹಾಗು ಶಿವಕುಮಾರ್ ಎಸ್.ಆರ್ ರವರ ಸೂಚನೆಯಂತೆ ಕಾರ್ಕಳ ನಗರ ಠಾಣೆಯ ಹೆಚ್.ಸಿ ರಮೇಶ್ ಹೆಚ್. ಹಾಗೂ ಪಿಸಿ ದರ್ಶನ್ ಅವರು ವಾರೆಂಟ್ ಅಸಾಮಿ ತೆಂಕ ಎಡಪದವಿನ ಲಿಯೋ ರೋಚ್ ನನ್ನು ಮಾರ್ಚ್ 19 ರಂದು  ಮಂಗಳೂರಿನ ಪಜೀರ್‌‌ನಲ್ಲಿ ಬಂಧಿಸಿದ್ದಾರೆ. ಆರೋಪಿಗೆ ಕಾರ್ಕಳ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -
spot_img

Latest News

error: Content is protected !!