ಕಾಸರಗೋಡು : ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನನ್ನು ಸ್ಥಳ ಮಹಜರಿಗೆಂದು ಕಾಸರಗೋಡಿನ ಕಸಬಾ ಸಮುದ್ರ ತೀರಕ್ಕೆ ಕರೆ ತಂದಿದ್ದರು.ಆದ್ರೆ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿ ಕೈ ಕೊಳದ ಜೊತೆ ಸಮುದ್ರಕ್ಕೆ ಹಾರಿ ನಾಪತ್ತೆಯಾಗಿದ್ದಾನೆ.
ಫೋಕ್ಸೋ ಪ್ರಕರಣದ ಆರೋಪಿಯಾಗಿರುವ ಮಹೇಶ್ ಎಂಬಾತ ಮಹಿಳೆಯರು ಸ್ನಾನ ಮಾಡುತಿದ್ದ ದೃಶ್ಯವನ್ನು ಆತ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಿಕ್ಕಿ ಬಿದ್ದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಆತನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿತ್ತು. ನಂತರ ತನಿಖೆ ವೇಳೆ ತಾನು ಚಿತ್ರೀಕರಿಸಿದ ಮೊಬೈಲನ್ನು ಸಮುದ್ರ ತೀರದಲ್ಲಿ ಎಸೆದಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ. ಇದರ ತನಿಖೆಗಾಗಿ ಸ್ಥಳ ಮಹಜರು ನಡೆಸಲು ಆರೋಪಿಯನ್ನು ಸಮುದ್ರ ತೀರಕ್ಕೆ ಕೈ ಕೊಳದೊಂದಿಗೆ ಕರೆತರಲಾಗಿತ್ತು. ಆದರೆ, ಈ ಸಂದರ್ಭ ಪೋಲೀಸರ ಕೈಯಿಂದ ತಪ್ಪಿಸಿಕೊಂಡ ಆರೋಪಿ ಸಮುದ್ರಕ್ಕೆ ಜಿಗಿದಿದ್ದಾನೆ.
ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಇದ್ದುದರಿಂದ ಆರೋಪಿ ನಾಪತ್ತೆಯಾಗಿದ್ದಾನೆ ಪೋಲೀಸರ ತಂಡ ಹುಡುಕಾಟ ನಡೆಸುತ್ತಿದ್ದಾರೆ.