Wednesday, October 14, 2026
Homeಕರಾವಳಿಬಂಟ್ವಾಳ: ಮನೆಯೊಳಗೆ‌ ನುಗ್ಗಿ‌ ಚೂರಿ‌ ಇರಿದ ಆರೋಪಿ ಅಂದರ್‌

ಬಂಟ್ವಾಳ: ಮನೆಯೊಳಗೆ‌ ನುಗ್ಗಿ‌ ಚೂರಿ‌ ಇರಿದ ಆರೋಪಿ ಅಂದರ್‌

- Advertisement -
- Advertisement -

ಬಂಟ್ವಾಳ: ಮನೆಯೊಳಗೆ‌ ನುಗ್ಗಿ‌ ಚೂರಿ‌ ಇರಿದ ಆರೋಪಿಯನ್ನು ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.ಅಬ್ದುಲ್ ರಹಿಮಾನ್ ಎಂಬಾತ ಬಂಧಿತ ಆರೋಪಿ. ಣಣ

ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ  ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ ಮಹಮ್ಮದ್ ರಮೀಜ್ ( 19) ಎಂಬಾತನಿಗೆ ಮನೆಗೆ ನುಗ್ಗಿ ಚೂರಿಯಿಂದ ಇರಿಯಲಾಗಿತ್ತು.

ಆರೋಪಿ ಅಬ್ದುಲ್ ರಹಿಮಾನ್ ಯಾವುದೋ ಹಣಕಾಸಿನ ಮತ್ತು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಮೀಜ್ ನನ್ನು ಕೊಲೆ ಮಾಡುವ ಉದ್ದೇಶದಿಂದ ಪೋನ್ ಮಾಡಿ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು, ಮನೆಯೊಳಗೆ ಬಂದು ಚೂರಿಯಿಂದ ಎರಡು‌ಬಾರಿ ತಿವಿದು ‌ಪರಾರಿಯಾಗಿದ್ದ.
ಆರೋಪಿ ಪರಂಗಿಪೇಟೆಯಲ್ಲಿ ಈ ಹಿಂದೆ ನಡೆದ ಚೂರಿ ಇರಿತ ಪ್ರಕರಣವೊಂದರ ಆರೋಪಿ ಕೂಡ ಆಗಿದ್ದ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಇನ್ನು ಅಬ್ದುಲ್ ರಹೀಮಾನ್ ಫರಂಗಿಪೇಟೆಯಲ್ಲಿ ಇರುವ ಮಾಹಿತಿ‌ ಮೇರೆಗೆ ದಾಳಿ ನಡೆಸಿದ‌ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!