Saturday, May 18, 2024
Homeಕರಾವಳಿನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಆಕಸ್ಮಿಕ ಬೆಂಕಿ

ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಆಕಸ್ಮಿಕ ಬೆಂಕಿ

spot_img
- Advertisement -
- Advertisement -

ಬೆಳ್ತಂಗಡಿ: ನಂಬರ್ ಪ್ಲೇಟ್ ಇಲ್ಲದ ಬೈಕೊಂದು ಹೊತ್ತಿ ಉರಿದ ಘಟನೆ ಬೆಳ್ತಂಗಡಿ ನಗರದ ಚರ್ಚ್ ರೋಡ್ ಬಳಿ ಡಿ.31ರಂದು ಮಧ್ಯಾಹ್ನ ನಡೆದಿದೆ.

ಬೆಳ್ತಂಗಡಿ ಚರ್ಚ್ ರೋಡ್ ನ ಸೈಂಟ್ ತೆರೇಸಾ ಹೈಸ್ಕೂಲು ಎದುರು ರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೈಕೊಂದು ಹೊತ್ತಿ ಉರಿಯುತಿದ್ದು ಇದನ್ನು ಗಮನಿಸಿದ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಅದರೆ ಬೈಕ್ ನ ವಾರೀಸುದಾರರು ಯಾರೂ ಅಲ್ಲಿ ಇರಲಿಲ್ಲ ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲಿ ವಾರೀಸುದಾರು  ಹಾಗೂ ನಂಬರ್  ಪ್ಲೇಟ್  ಇಲ್ಲದ ಬೈಕ್ ಮೇಲೆ ಅನುಮಾನ ಮೂಡಿದ್ದು. ಎಲ್ಲಿಂದಲೋ ನಂಬರ್ ಪ್ಲೇಟ್ ತೆಗೆದು ಬೈಕ್ ಕದ್ದು ತರುವ ವೇಳೆ ಬೆಂಕಿ ಕಾಣಿಸಿಕೊಂಡಿದ್ದು ಈ ಸಮಯದಲ್ಲಿ ಬೈಕ್ ಅಲ್ಲೆ ಬಿಟ್ಟು ಪರಾರಿಯಾಗಿರಬಹುದು ಅಥವಾ ಏನಾದರೂ ಗಾಯಗಳಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬೈಕ್ ಬಿಟ್ಟು ತೆರಳಿರುವ ಬಗ್ಗೆಯೂ ಅನುಮಾನಿಸಲಾಗಿದೆ. ಒಂದು ವಾರಗಳ ಹಿಂದೆ ಬೈಕೊಂದು ಕಳ್ಳತನವಾಗಿದ್ದು ಅದೇ ಬೈಕ್ ಆಗಿರಬಹುದೇ ಎಂಬ ಬಗ್ಗೆಯೂ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತಿದ್ದಾರೆ.

- Advertisement -
spot_img

Latest News

error: Content is protected !!