Sunday, June 7, 2026
Homeತಾಜಾ ಸುದ್ದಿಗ್ಯಾರೇಜ್ ನಲ್ಲಿ ಬೆಂಕಿ ಆಕಸ್ಮಿಕ; 10 ಕ್ಕೂ ಅಧಿಕ ಐಷಾರಾಮಿ ಕಾರುಗಳು ಬೆಂಕಿಗಾಹುತಿ

ಗ್ಯಾರೇಜ್ ನಲ್ಲಿ ಬೆಂಕಿ ಆಕಸ್ಮಿಕ; 10 ಕ್ಕೂ ಅಧಿಕ ಐಷಾರಾಮಿ ಕಾರುಗಳು ಬೆಂಕಿಗಾಹುತಿ

- Advertisement -
- Advertisement -

ಬೆಂಗಳೂರು : ಕಾರು ಗ್ಯಾರೇಜ್ ನಲ್ಲಿ ಧಿಡೀರ್ ಬೆಂಕಿ  ಅನಾಹುತ ಸಂಭವಿಸಿ 10 ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಬೆಂಕಿಗಾಹುತಿಯಾದ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ಕಸ್ತೂರಿ ನಗರದಲ್ಲಿ ಸಂಭವಿಸಿದೆ.

ಕೋಟ್ಯಾಂತರ ರೂಪಾಯಿ ಮೌಲ್ಯದ 10 ಕ್ಕೂ ಅಧಿಕ ಐಷಾರಾಮಿ ಕಾರುಗಳು ಸುಟ್ಟು ಕರಕಲಾಗಿದ್ದು, ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಚಾಂದ್ ಪಾಷ, ತಬೇರೇಸ್ ಪಾಷ ಎಂಬುವವರಿಗೆ ಸೇರಿದ ಗ್ಯಾರೇಜ್ ನಲ್ಲಿ ಅನಾಹುತ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

- Advertisement -

Latest News

error: Content is protected !!