Wednesday, April 16, 2025
Homeಕರಾವಳಿಉಡುಪಿಆಕಸ್ಮಿಕವಾಗಿ ಕೆರೆಗೆ ಬಿದ್ದು ಯಕ್ಷಗಾನ ಕಲಾವಿದನ ಸಾವು-ಮಂದರ್ತಿ ಮೇಳದ ಸ್ತ್ರೀ ವೇಷಧಾರಿ ಸುದೀಪ ಶೆಟ್ಟಿ ಇನ್ನಿಲ್ಲ!..

ಆಕಸ್ಮಿಕವಾಗಿ ಕೆರೆಗೆ ಬಿದ್ದು ಯಕ್ಷಗಾನ ಕಲಾವಿದನ ಸಾವು-ಮಂದರ್ತಿ ಮೇಳದ ಸ್ತ್ರೀ ವೇಷಧಾರಿ ಸುದೀಪ ಶೆಟ್ಟಿ ಇನ್ನಿಲ್ಲ!..

spot_img
- Advertisement -
- Advertisement -

ಉಡುಪಿ: ಇಲ್ಲಿನ ಅಮಾಸೆಬೈಲು ಗ್ರಾಮದ ಕೆಲ ಸುಗ್ಗಿಗದ್ದೆ ಸುದೀಪ ಶೆಟ್ಟಿ (24) ಅವರು ಮನೆಯ ಪಕ್ಕದ ಕೆರೆಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪಿದ್ದ ಘಟನೆ ವರದಿಯಾಗಿದೆ.ಯಕ್ಷಗಾನ ಕಲಾವಿದರಾಗಿದ್ದ ಸುದೀಪ ಶೆಟ್ಟಿ 2 ವರ್ಷದ ಹಿಂದೆ ರಸ್ತೆ ಅಪಘಾತಕ್ಕೊಳಗಾಗಿ ಆಗಾಗ್ಗೆ ತಲೆಸುತ್ತು ಬಂದು ಬೀಳುತ್ತಿದ್ದರು. ಮನೆಯಿಂದ ಹೊರಗೆ ಹೋದವರು ಮರಳಿ ಬಾರದೆ ಇದ್ದಾಗ ಹುಡುಕಾಡಿದ ಮನೆಯವರಿಗೆ ಸಮೀಪದ ನೀರಿನ ತೋಡಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕಲಾವಿದ ಸುದೀಪ ಶೆಟ್ಟಿ ಅವರು ಮಂದಾರ್ತಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿದ್ದರು.

ಮೇಗರವಳ್ಳಿ, ಸಿಗಂಧೂರು ಹಾಗೂ ಮಂದಾರ್ತಿ ಮೇಳಗಳಲ್ಲಿ ಕಳೆದ ಕೆಲವು ವರ್ಷಗಳಿಂದ ವೇಷಧಾರಿಯಾಗಿದ್ದರು.ತೋಡಿಗೆ ಬಹಿರ್ದೆಸೆಗೆಂದು ಹೋದಾಗ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!