Thursday, June 4, 2026
Homeಕರಾವಳಿಮಂಗಳೂರು : ಕ್ರೇನ್‌ ಢಿಕ್ಕಿ ಹೊಡೆದು ಎಂಆರ್‌ಪಿಎಲ್‌ ಉದ್ಯೋಗಿ ಸಾವು

ಮಂಗಳೂರು : ಕ್ರೇನ್‌ ಢಿಕ್ಕಿ ಹೊಡೆದು ಎಂಆರ್‌ಪಿಎಲ್‌ ಉದ್ಯೋಗಿ ಸಾವು

- Advertisement -
- Advertisement -

ಮಂಗಳೂರು : ಕ್ರೇನ್‌ ಢಿಕ್ಕಿ ಹೊಡೆದ ಪರಿಣಾಮ ಎಂಆರ್‌ಪಿಎಲ್‌ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ  ಇಂದು ಮಧ್ಯಾಹ್ನ ನಡೆದಿದೆ. ಕೇಶವ ಕೋಟ್ಯಾನ್‌ (40) ಮೃತ ದುರ್ದೈವಿ.

ಕೇಶವ ಕೋಟ್ಯಾನ್‌ ಅವರು ಎಂಆರ್‌ಪಿಎಲ್‌ ಒಳಗೆ ವರ್ಕ್‌ ಶಾಪ್‌ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕ್ರೇನ್‌ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದರು.  ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!