ಕಾರ್ಕಳ: ಕಾರು ಮತ್ತು ಆಟೋರಿಕ್ಷಾದ ನಡುವೆಅಪಘಾತ ಸಂಭವಿಸಿ ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯಿಂದ ಸಚ್ಚೇರಿಪೇಟೆಗೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಶ್ರೀಕಾಂತ್ಸಾವನ್ನಪ್ಪಿದ ದುರ್ದೈವಿ.
ರಿಕ್ಷಾ ಚಾಲಕ ಮಹಮ್ಮದ್ ಕೈಫ್ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಪಘಾತದಲ್ಲಿ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದರೆ, ಕಾರು ಭಾಗಶಃ ಹಾನಿಯಾಗಿದ್ದು, ಕಾರು ಚಾಲಕ ಸಚ್ಚೇರಿಪೇಟೆಯ ಅನಂತ್ ಭಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಸ್ತೆ ತಿರುವಿನಲ್ಲಿ ನಡೆದ ಅಪಘಾತಕ್ಕೆ ರಿಕ್ಷಾ ಚಾಲಕನ ಅತೀ ವೇಗ ಮತ್ತು ಅಜಾಗರುಕತೆಯೇ ಕಾರಣ ಎನ್ನಲಾಗಿದೆ. ಕೂಡಲೇ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಸಂಚಾರ ಸುಗಮಗೊಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಯಾಣಿಕ ಮೃತ ಶ್ರೀಕಾಂತ್ ತನ್ನೊಟ್ಟಿಗೆ ನಾಯಿ ಮರಿಯೊಂದನ್ನು ಎಲ್ಲಿಗೋ ಕೊಂಡು ಹೋಗುತ್ತಿದ್ದು, ಸದ್ಯ ನಾಯಿ ಮರಿ ಅಪಘಾತದ ಸ್ಥಳದಲ್ಲಿ ಅನಾಥವಾಗಿದೆ ಎನ್ನಲಾಗಿದೆ.


