Sunday, June 7, 2026
Homeಕರಾವಳಿಉಪ್ಪಿನಂಗಡಿ: ಲಾರಿ ಹಾಗೂ ದ್ವಿಚಕ್ರ ವಾಹನ ನಡುವೆ ಭೀಕರ ರಸ್ತೆ ಅಪಘಾತ; ಬಾಲಕ ಸಾವು, ಇಬ್ಬರಿಗೆ...

ಉಪ್ಪಿನಂಗಡಿ: ಲಾರಿ ಹಾಗೂ ದ್ವಿಚಕ್ರ ವಾಹನ ನಡುವೆ ಭೀಕರ ರಸ್ತೆ ಅಪಘಾತ; ಬಾಲಕ ಸಾವು, ಇಬ್ಬರಿಗೆ ಗಂಭೀರ!

- Advertisement -
- Advertisement -

ಉಪ್ಪಿನಂಗಡಿ: ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಮೃತಪಟ್ಟು ಮತ್ತಿಬ್ಬರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಬೈಪಾಸ್ ನಲ್ಲಿ ಸೋಮವಾರ ನಡೆದಿದೆ.

ಬಾಲಕ ತನ್ನ ತಾಯಿಯ ಜೊತೆ ತೆರಳುತ್ತಿದ್ದ ವೇಳೆ ಟ್ಯಾಂಕರ್ ಢಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿ ರಸ್ತೆಗೆ ಎಳೆಯಲ್ಪಟ್ಟಿದ್ದಾನೆ ಎನ್ನಲಾಗಿದೆ.ಗಂಭೀರ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ದ್ವಿಚಕ್ರ ವಾಹನವನ್ನು ಮಹಿಳೆ ಚಲಾಯಿಸುತ್ತಿದ್ದರು ಎಂದು ಹೇಳಲಾಗಿದ್ದು, ತಾಯಿ ಮತ್ತು ಸಹೋದರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!