Sunday, June 16, 2024
Homeತಾಜಾ ಸುದ್ದಿಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ : ಬಿಜೆಪಿಗೆ ಭರ್ಜರಿ ಗೆಲುವು

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ : ಬಿಜೆಪಿಗೆ ಭರ್ಜರಿ ಗೆಲುವು

spot_img
- Advertisement -
- Advertisement -

ಬೆಳಗಾವಿ: ತೀವ್ರ ಕುತೂಹಲ ಮೂಡಿಸಿದ್ದ ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಈಗಾಗಲೇ 39 ವಾರ್ಡ್ ಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 58 ವಾರ್ಡಗಳನ್ನು ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬರೊಬ್ಬರಿ 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಚಿನ್ಹೆಗಳನ್ನು ಮುಂದಿಟ್ಟುಕೊಂಡು ಸ್ಪರ್ಧೆಗೆ ಇಳಿದಿದ್ದರು. ಇದೀಗ ಅದರ ಫಲಿತಾಂಶ ಪ್ರಕಟವಾಗುತ್ತಿದ್ದು, ಬೆಳಗಾವಿ ನಗರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರುವುದು ಖಚಿತವಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಬಿಜೆಪಿಯಿಂದ 55 ಅಭ್ಯರ್ಥಿಗಳು ಸ್ಪರ್ಧಿಸಿದ್ರೆ, ಕಾಂಗ್ರೆಸ್‌ನಿಂದ 45, ಜೆಡಿಎಸ್‌ನಿಂದ 11 ಹಾಗೂ ಎಂಇಎಸ್‌ನಿಂದ 21 ಮಂದಿ ಸ್ಪರ್ಧಿಸಿದ್ದಾರೆ . ಆಪ್‌, ಪಕ್ಷೇತರರು ಸೇರಿದಂತೆ ಒಟ್ಟು 217 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ಪೈಕಿ ಬಿಜೆಪಿ ಸದ್ಯ 39 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 9, ಪಕ್ಷೇತರರು 12 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಮೇಯರ್ ಸ್ಥಾನದ ಮ್ಯಾಜಿಕ್ ನಂಬರ್ ದಾಟಿದೆ.

ಖಾತೆ ತೆರೆದ ಓವೈಸಿ ನೇತೃತ್ವದ ಎಐಎಂಐಎಂ
58 ವಾರ್ಡುಗಳ ವಾರ್ಡುಗಳ ಪೈಕಿ 1 ವಾರ್ಡ್‌ನಲ್ಲಿ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಜಯ ಸಾಧಿಸಿದೆ. ವಾರ್ಡ್ -18ರಲ್ಲಿ ಎಐಎಂಐಎಂ ಅಭ್ಯರ್ಥೀ ಶಾಯಿ ಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ.

- Advertisement -
spot_img

Latest News

error: Content is protected !!