Monday, June 8, 2026
Homeಕರಾವಳಿಬಂಟ್ವಾಳ: ನಕಲಿ ಫೇಸ್ಬುಕ್ ಖಾತೆ ತೆರೆದು ಮಹಿಳೆಗೆ ಕಿರುಕುಳ !

ಬಂಟ್ವಾಳ: ನಕಲಿ ಫೇಸ್ಬುಕ್ ಖಾತೆ ತೆರೆದು ಮಹಿಳೆಗೆ ಕಿರುಕುಳ !

- Advertisement -
- Advertisement -

ಬಂಟ್ವಾಳ: ಮಹಿಳೆಯೊಬ್ಬರಿಗೆ ನಕಲಿ ಫೇಸ್‌ಬುಕ್ ಖಾತೆ ತೆರೆದು ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಬಜ್ಪೆ ಕೈಕಂಬ ನಿವಾಸಿ ಮಹಮ್ಮದ್ ಅಲಿ ಎಂದು ಗುರುತಿಸಲಾಗಿದ್ದು, ಅನಿಲ್ ಶೆಟ್ಟಿ ಎನ್ನುವ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದಿರುವ ಮಹಮ್ಮದ್ ಅಲಿ, ಮಹಿಳೆಗೆ ಆಶ್ಲೀಲ ಚಿತ್ರ ಕಳುಹಿಸುತ್ತಿದ್ದ ಜತೆಗೆ ಅಸಭ್ಯವಾಗಿ ಮಾತನಾಡುತ್ತಿದ್ದ ಎಂದು ಬಂಟ್ವಾಳ ನಿವಾಸಿಯಾಗಿರುವ ಮಹಿಳೆ ತಾನು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನಕಲಿ ಖಾತೆ ತೆರೆದು ಮಹಮ್ಮದ್ ಹಲವಾರು ಮಹಿಳೆಯರಿಗೆ ಕಿರುಕುಳ ನೀಡಿತ್ತಿರುವ ಆರೋಪವಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!