Wednesday, June 3, 2026
Homeಇತರವೇಣೂರು: ಆಕ್ಟಿವಾ ಹಾಗೂ ಒಮ್ನಿ ಕಾರು ನಡುವೆ ಮುಖಾಮುಖಿ ಡಿಕ್ಕಿ...!

ವೇಣೂರು: ಆಕ್ಟಿವಾ ಹಾಗೂ ಒಮ್ನಿ ಕಾರು ನಡುವೆ ಮುಖಾಮುಖಿ ಡಿಕ್ಕಿ…!

- Advertisement -
- Advertisement -

ವೇಣೂರು: ದ್ವಿಚಕ್ರ ವಾಹನ ಮತ್ತು ಒಮ್ನಿ ಕಾರು ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನಿಗೆ ಗಾಯಗೊಂಡ ಘಟನೆ ಗೋಳಿಯಂಗಡಿ ಎಂಬಲ್ಲಿ ನಡೆದಿದೆ.

ಗಾಯಾಳುವನ್ನು ಆಕ್ಟಿವಾ ಸವಾರ ಗೋಳಿಯಂಗಡಿ ನಿವಾಸಿ ಆನಂದರವರ ಪುತ್ರ ಅಂಕಿತ್ ಎಂದು ಗುರುತಿಸಲಾಗಿದೆ.

ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕಿತ್ ರವರು ತಮ್ಮ ಆಕ್ಟಿವಾ ವಾಹನದಲ್ಲಿ ಮೂಡಬಿದ್ರಿಯಿಂದ ಕುಕ್ಕೇಡಿ ಕಡೆಗೆ ಬರುತ್ತಿದ್ದ ಸಂದರ್ಭ ಬೆಳ್ತಂಗಡಿ ಕಡೆಯಿಂದ ವೇಣೂರು ಕಡೆ ಬರುತ್ತಿದ್ದ ಒಮ್ನಿ ಕಾರು ನಡುವೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಹಾಗೂ ಒಮ್ನಿ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ವೇಣೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!