Thursday, June 4, 2026
Homeಕರಾವಳಿಮಂಗಳೂರು: ಓಮ್ನಿ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ

ಮಂಗಳೂರು: ಓಮ್ನಿ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ

- Advertisement -
- Advertisement -

ಮಂಗಳೂರು: ಓಮ್ನಿ ಢಿಕ್ಕಿ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಆಕಾಶಭವನದ ಬಳಿ ನಡೆದಿದೆ.ಸದಾಖತ್‌ (40) ಮೃತ ದುರ್ದೈವಿ.

ಸದಾಖತ್‌ ಶುಕ್ರವಾರ ರಾತ್ರಿ 11 ಗಂಟೆಯ ಸುಮಾರಿಗೆ ಮಸೀದಿಯ ಕಾರ್ಯಕ್ರಮವೊಂದರಿಂದ ದ್ವಿಚಕ್ರ ವಾಹನದಲ್ಲಿ ವಾಪಸ್‌ ತೆರಳುತ್ತಿದ್ದಾಗ ಇಳಿಜಾರಿನಲ್ಲಿ ಹಿಂದಿನಿಂದ ಬಂದ ಓಮ್ನಿ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಅನಂತರ ಕಾಂಪೌಂಡ್ ಗೋಡೆಗೆ ಢಿಕ್ಕಿ ಹೊಡೆದಿದೆ.

ದ್ವಿಚಕ್ರ ವಾಹನ ಅದರ ನಡುವೆ ಸಿಲುಕಿದ್ದರಿಂದ ಸವಾರ ಸದಾಖತ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇಂದು ಅವರು ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!