Monday, June 8, 2026
Homeಕರಾವಳಿಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ವಾಪಾಸ್ಸಾಗುತ್ತಿದ್ದಾಗ ಅಪಘಾತ; ಕಾರುಗಳೆರಡು ಜಖಂ

ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ವಾಪಾಸ್ಸಾಗುತ್ತಿದ್ದಾಗ ಅಪಘಾತ; ಕಾರುಗಳೆರಡು ಜಖಂ

- Advertisement -
- Advertisement -

ಸುಬ್ರಮಣ್ಯ : ಕುಕ್ಕೆಗೆ ತೆರಳಿ  ವಾಪಸಾಗುತ್ತಿದ್ದ ವೇಳೆ ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಕಾರುಗಳು ಜಖಂ ಆದ ಘಟನೆ ಬಿಳಿನೆಲೆ ಸಮೀಪ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೊರಲಿಕೊಪ್ಪದ ನಾಗರಾಜು ಎಂಬವರು ಕುಟುಂಬಸ್ಥರೊಂದಿಗೆ ಕೊರಲಿಕೊಪ್ಪದಿಂದ ದೇವರ ದರ್ಶನಕ್ಕಾಗಿ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗಿ  ಉಡುಪಿಗೆ ಹೋಗುತ್ತಿದ್ದ ವೇಳೆ   ನೆಟ್ಟಣ ಎಂಬಲ್ಲಿ ಧರ್ಮಸ್ಥಳ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.

ಈ ವೇಳೆ ಎರಡು ಕಾರುಗಳು ಜಖಂ ಆಗಿದೆ.   ಇನ್ನು  ಅಜಾಗರೂಕತೆಯಿಂದ ಮತ್ತು ನಿರ್ಲಕ್ಷತನದಿಂದ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ನಾಗರಾಜು ಅವರು ಕಡಬ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!