Friday, June 5, 2026
Homeಕರಾವಳಿಸುಳ್ಯ; ಜಾಲ್ಸೂರಿನಲ್ಲಿ ಬಸ್ ಹಾಗೂ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಮಧ್ಯೆ ಅಪಘಾತ

ಸುಳ್ಯ; ಜಾಲ್ಸೂರಿನಲ್ಲಿ ಬಸ್ ಹಾಗೂ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಮಧ್ಯೆ ಅಪಘಾತ

- Advertisement -
- Advertisement -

ಸುಳ್ಯ; ಬಸ್ ಹಾಗೂ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಮಧ್ಯೆ ಅಪಘಾತವಾಗಿರುವ ಘಟನೆ ಸುಳ್ಯದ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ನಡೆದಿದೆ.

 ಬಸ್‌ ಹಾಗೂ ಆ್ಯಂಬುಲೆನ್ಸ್ ಪರಸ್ಪರ ಢಿಕ್ಕಿಯಾಗಿ ಎರಡೂ ವಾಹನಗಳು ಜಖಂಗೊಂಡಿವೆ. ಕಾಸರಗೋಡು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕೇರಳ ಸರಕಾರಿ ಬಸ್‌ ಹಾಗೂ ಮಡಿಕೇರಿಯಿಂದ ಮಂಗಳೂರಿಗೆ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಮಧ್ಯೆ ಢಿಕ್ಕಿ ಸಂಭವಿಸಿದೆ.

ಆ್ಯಂಬುಲೆನ್ಸ್ ನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನೆ ಬಳಿಕ ರೋಗಿಯನ್ನು ಬೇರೆ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

- Advertisement -

Latest News

error: Content is protected !!