Monday, May 13, 2024
Homeಕರಾವಳಿರಾಜ್ಯಾದ್ಯಂತ ಬೆಳ್ಳಂ ಬೆಳಗ್ಗೆ ಭ್ರಷ್ಟರ ಮನೆಗಳಿಗೆ ಎಸಿಬಿ ದಾಳಿ, ಅಪಾರ ಪ್ರಮಾಣದ ಆಸ್ತಿ ಜಪ್ತಿ !

ರಾಜ್ಯಾದ್ಯಂತ ಬೆಳ್ಳಂ ಬೆಳಗ್ಗೆ ಭ್ರಷ್ಟರ ಮನೆಗಳಿಗೆ ಎಸಿಬಿ ದಾಳಿ, ಅಪಾರ ಪ್ರಮಾಣದ ಆಸ್ತಿ ಜಪ್ತಿ !

spot_img
- Advertisement -
- Advertisement -

ಬೆಳ್ಳಂ ಬೆಳಗ್ಗೆ ಭ್ರಷ್ಟ ಮನೆಗಳಿಗೆ ಎಸಿಬಿ ದಾಳಿಯನ್ನು ನಡೆಸಿದೆ. ರಾಜ್ಯದ್ಯಂತ 75 ಕಡೆ 400 ಅಧಿಕಾರಿಗಳಿಂದ ಮೆಗಾ ರೇಡ್ ನಡೆಸಲಾಗಿದೆ.

ಬೆಂಗಳೂರಿನ ಮೂರು ಕಡೆಗಳಲ್ಲಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.

ಬಾಗಲಕೋಟೆ, ರಾಯಚೂರು, ಗದಗ, ವಿಜಯಪುರ, ಬೆಂಗಳೂರು, ಯಾದಗಿರಿ, ಚಿಕ್ಕಮಗಳೂರು, ತುಮಕೂರು, ಮೈಸೂರು, ಹಾಸನ, ಚಾಮರಾಜನಗರ, ಕೊಪ್ಪಳ ಹಾಗೂ ವಿವಿಧ ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಆಸ್ತಿ ಜಪ್ತಿ ಮಾಡಲಾಗಿದೆ.

ಎಸಿಬಿ ದಾಳಿ ಒಳಗಾದವರ ವಿವರ ಗಜೇಂದ್ರ ಕುಮಾರ್ , ಅಡಿಷನಲ್ ಡೈರೆಕ್ಟರ್ ಸಾರಿಗೆ ಇಲಾಖೆ. ರಾಕೇಶ್ ಕುಮಾರ್, ಬಿಡಿಎ ಟೌನ್ ಪ್ಲಾನಿಂಗ್, ಬಿಡಿಎ. ರಮೇಶ್ ಕನಕಟ್ಟೆ, Rfo, ಯಾದಗಿರಿ. ಬಸವರಾಜ, ಶೇಖರ್ ರೆಡ್ಡಿ ಇಂಜಿನಿಯರ್ ,ಗೋಕಾಕ್. ಬಸವಕುಮಾರ್, ಶಿರಸ್ತೆದಾರ್ ಅಣ್ಣಿಗೇರಿ.ಗೋಪಿನಾಥ್ , ಮಾಳಗಿ, ನಿರ್ಮಿತಿ ಕೇಂದ್ರ ವಿಜಯಪುರ. ಕೆ.ಬಿ. ಶಿವಕುಮಾರ್, ಅಡಿಷನಲ್ ಡೈರೆಕ್ಟರ್, ಕಾಮರ್ಸ್ ಅಂಡ್ ಇಂಡಸ್ಟ್ರೀಸ್. ಶಿವಾನಂದ ಪಿ. ಶರಣಪ್ಪ, RFO, ಬಾದಾಮಿ. ಮಂಜುನಾಥ್, ಅಸಿಸ್ಟೆಂಟ್ ಕಮೀಷನರ್, ರಾಮನಗರ. ಶ್ರೀನಿವಾಸ್, ಜನರಲ್ ಮ್ಯಾನೇಜರ್ ಸಮಾಜ ಕಲ್ಯಾಣ ಇಲಾಖೆ. ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ. ಕೃಷ್ಣನ್, ಎಇ, ಎಪಿಎಂಸಿ ಹಾವೇರಿ. ಚಲುವರಾಜ್, ಅಬಕಾರಿ ನಿರೀಕ್ಷಕ, ಗುಂಡ್ಲುಪೇಟೆ. ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ. ಬಾಲಕೃಷ್ಣ, H.N. ವಿಜಯನಗರ ಪೊಲೀಸ್ ಠಾಣೆ, ಮೈಸೂರು. ಗವಿ ರಂಗಪ್ಪ, ಎಇ, ಲೋಕೋಪಯೋಗಿ ಇಲಾಖೆ. ಅಶೋಕ ರೆಡ್ಡಿ ಪಾಟೀಲ್, ಎಇಇ, ಕೃಷ್ಣ ಜಲ ಭಾಗ್ಯ ನಿಗಮ, ರಾಯಚೂರು. ದಯಾ ಸುಂದರ್ ರಾಜು, ಎಇ ‌kptcl, ದಕ್ಷಿಣ ಕನ್ನಡ ಇನ್ನೂ ಅನೇಕರ ಮನೆಗೆ ಎಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ.

- Advertisement -
spot_img

Latest News

error: Content is protected !!