Friday, June 26, 2026
Homeಕರಾವಳಿಉಡುಪಿಉಡುಪಿ ಸಣ್ಣ ನೀರಾವರಿ ಇಲಾಖೆ ಎಇ ಹರೀಶ್ ನಿವಾಸದ ಮೇಲೆ ಎಸಿಬಿ ದಾಳಿ

ಉಡುಪಿ ಸಣ್ಣ ನೀರಾವರಿ ಇಲಾಖೆ ಎಇ ಹರೀಶ್ ನಿವಾಸದ ಮೇಲೆ ಎಸಿಬಿ ದಾಳಿ

- Advertisement -
- Advertisement -

ಉಡುಪಿ: ಉಡುಪಿಯಲ್ಲಿ ಇಂದು ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದೆ.

ಉಡುಪಿ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ
ಅಸಿಸ್ಟೆಂಟ್ ಇಂಜಿನಿಯರ್ ಹರೀಶ್ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ.

ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಮನೆ ಮೇಲೆ ದಾಳಿ ನಡೆದಿದ್ದು, ಎಸಿಬಿ ಡಿವೈಎಸ್ಪಿ ಮಂಜುನಾಥ್ ಕವರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದಲ್ಲಿ ಬೆಳಗ್ಗೆಯೇ ಹರೇ ನಿವಾಸದ ಮೇಲೆ ಎಸಿಬಿ ರೈಡ್ ನಡೆದಿದೆ.

ಎಇ ಹರೀಶ್ ನಿವಾಸದಲ್ಲಿ ದಾಖಲೆಗಳು ಮತ್ತಿತರ ವಸ್ತುಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ರಾಜ್ಯಾದ್ಯಂತ ‌ಇಂದು ಸುಮಾರು ವಿವಿಧ ಇಲಾಖೆಗಳ ಹನ್ನೊಂದು ಅಧಿಕಾರಿಗಳ ನಿವಾಸಗಳ ಮೇಲೆ ಎಸಿಬಿ ದಾಳಿ ನಡೆದಿದೆ.

- Advertisement -

Latest News

error: Content is protected !!