Friday, June 5, 2026
Homeಕರಾವಳಿಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಅಭ್ಯಾಸ ವರ್ಗ ಕಾರ್ಯಕ್ರಮ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಅಭ್ಯಾಸ ವರ್ಗ ಕಾರ್ಯಕ್ರಮ

- Advertisement -
- Advertisement -

ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಅಭ್ಯಾಸ ವರ್ಗವು ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ಇಂದು ನಡೆಯಿತು. ಅಭ್ಯಾಸ ವರ್ಗದ ಉದ್ಘಾಟನೆಯನ್ನು ಸುಳ್ಯ ಎಪಿಎಂಸಿಯ ಅಧ್ಯಕ್ಷರಾದ ವಿನಯ್ ಕುಮಾರ್ ಮುಳುಗಾಡು ನೆರವೇರಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಸಹ ಕಾರ್ಯದರ್ಶಿ ಸಂದೇಶ್ ರೈ ಮಜಕ್ಕಾರ್, ನಗರ ಕಾರ್ಯದರ್ಶಿ ಭವಿತೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ನಂತರ ನಡೆದ ಅಭ್ಯಾಸ ವರ್ಗದ ಸೈದ್ಧಾಂತಿಕ ಭೂಮಿಕೆ ಅವಧಿಯನ್ನು ಎ.ಬಿ.ವಿ.ಪಿ ಹಿರಿಯ ಕಾರ್ಯಕರ್ತ ವೆಂಕಟೇಶ್ ಮದೂರು ಅವರು ನಡೆಸಿಕೊಟ್ಟರು. ಅಭ್ಯಾಸ ವರ್ಗದ ಕ್ಯಾಂಪಸ್ ಕಾರ್ಯ ಅವಧಿಯನ್ನು ರಾಜ್ಯ ಸಹ ಕಾರ್ಯದರ್ಶಿಯಾದ ಸಂದೇಶ್ ರೈ ಮುಜಕ್ಕಾರ್ ಅವರು ನಡೆಸಿಕೊಟ್ಟರು. ಕಾರ್ಯ ಪದ್ದತಿ ಅವಧಿಯನ್ನು ಎ.ಬಿ.ವಿ.ಪಿ ಹಿರಿಯ ಕಾರ್ಯಕರ್ತರಾದ ಯತೀಶ್ ಅವರು ನಡೆಸಿಕೊಟ್ಟರು.

ಎ.ಬಿ.ವಿ.ಪಿ ಮಂಗಳೂರು ವಿಭಾಗದ ಪ್ರಮುಖರಾದ ಕೇಶವ ಬಂಗೇರ ಇವರು ಸಮರೋಪ ಭಾಷಣ ಮಾಡಿದರು. ಕೆ.ವಿ.ಜಿ ಎಂಜಿನಿಯರಿಂಗ್ ಕಾಲೇಜಿನ ರುಚಿರ್ ರವರು ನೂತನ ನಗರ ಕಾರ್ಯದರ್ಶಿಯಾಗಿ ಅಯ್ಕೆ ಮಾಡಲಾಗಿದೆ

- Advertisement -

Latest News

error: Content is protected !!