Thursday, April 25, 2024
Homeತಾಜಾ ಸುದ್ದಿ'ಕೊರೋನಾ'ಳನ್ನು ಅಭ್ಯರ್ಥಿ ಎಂದು ಘೋಷಿಸಿ ಜೈ ಹಾಕುತ್ತಿರುವ ಬಿಜೆಪಿ ಕಾರ್ಯಕರ್ತರು.!

‘ಕೊರೋನಾ’ಳನ್ನು ಅಭ್ಯರ್ಥಿ ಎಂದು ಘೋಷಿಸಿ ಜೈ ಹಾಕುತ್ತಿರುವ ಬಿಜೆಪಿ ಕಾರ್ಯಕರ್ತರು.!

spot_img
- Advertisement -
- Advertisement -

ಕೊಲ್ಲಂ: ‘ಕೊರೊನಾ’ ಇಡೀ ಜಗತ್ತಿನಲ್ಲಿ ಲಕ್ಷಾಂತರ ಜನರನ್ನು ಬಲಿ ಪಡೆದು, ಭಯಭೀತಿ ಮೂಡಿಸಿದ್ದರೆ, ಇಲ್ಲೊಬ್ಬರು ‘ಕೊರೊನಾ’ ನನಗೇ ವೋಟು ಹಾಕಿ, ನಿಮ್ಮ ಸೇವೆ ಮಾಡುತ್ತೇನೆ ಎಂದು ಪ್ರೀತಿಯಿಂದ ಕೇಳಿಕೊಳ್ಳುತ್ತಿದ್ದಾರೆ. ಹೌದು, ಕೇರಳದ ಕೊಲ್ಲಂ ಕಾರ್ಪೊರೇಶನ್ ನ ಮದಿಲಿಲ್ ವಿಭಾಗದ ಬಿಜೆಪಿ ಅಭ್ಯರ್ಥಿಯಾಗಿ 24ರ ಹರೆಯದ ಕೊರೊನಾ ಥಾಮಸ್ ಚುನಾವಣಾ ಕಣಕ್ಕಿಳಿದಿದ್ದಾರೆ.

24 ವರ್ಷದ ಕೊರೊನಾ ಥಾಮಸ್​ಗೆ ಅವರ ಹೆಸರು ಈ ವರ್ಷ ತುಂಬಾನೇ ಪ್ರಸಿದ್ಧಿ ತಂದುಕೊಟ್ಟಿದೆಯಂತೆ. ಇಷ್ಟು ವರ್ಷ ನನ್ನ ಹೆಸರಿನ ಬಗ್ಗೆ ನನಗೆ ಏನೂ ಅನ್ನಿಸ್ತಾ ಇರಲಿಲ್ಲ. ಆದರೆ ಇದೀಗ ಎಲ್ಲೆಡೆ ಕೊರೊನಾ ವೈರಸ್​ನದ್ದೇ ಚರ್ಚೆ ಬಳಿಕ ನನ್ನ ಹೆಸರೇ ನನಗೆ ವಿಚಿತ್ರ ಎನಿಸೋಕೆ ಶುರುವಾಗಿದೆ ಅಂತಾರೆ ಕೊರೊನಾ ಥಾಮಸ್​.

ಕೊರೊನಾರ ತಂದೆ ಮೂಲತಃ ಕಲಾವಿದರಂತೆ. ತಮ್ಮ ಅವಳಿ ಮಕ್ಕಳಿಗೆ ವಿಶೇಷವಾದ ಹೆಸರನ್ನಿಡಬೇಕು ಎಂದು ನಿರ್ಧರಿಸಿದ ಅವರು, ಹೆಣ್ಣು ಮಗುವಿಗೆ ಕೊರೊನಾ ಹಾಗೂ ಗಂಡು ಮಗುವಿಗೆ ಕೋರಲ್​ ಎಂದು ನಾಮಕರಣ ಮಾಡಿದ್ದರಂತೆ.

ಅಂದಹಾಗೆ ಬಿಜೆಪಿ ಅಭ್ಯರ್ಥಿ ‘ಕೊರೊನಾ’ ಗರ್ಭಿಣಿಯಾಗಿದ್ದಾಗ ಕೊರೊನಾ ಸೋಂಕು ದೃಢವಾಗಿದ್ದರಿಂದಲೂ ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿದ್ದರು. ಆದರೆ ಕೊರೊನಾ ವಿರುದ್ಧ ಜಯಿಸಿರುವ ಕೊರೊನಾ ಥಾಮಸ್​ ಮಗು ಕೂಡ ಆರೋಗ್ಯವಾಗಿದೆ. ಕೊರೊನಾ ಪತಿ ಕೂಡ ಬಿಜೆಪಿ ಸದಸ್ಯರಾಗಿದ್ದು ಕೊರೊನಾ ರಾಜಕೀಯ ಹಾದಿ ತುಳಿಯಲು ಅವರೇ ಸ್ಪೂರ್ತಿಯಾಗಿದ್ದಾರೆ.

ಕೇರಳದಲ್ಲಿ ಪಂಚಾಯತಿ ಚುನಾವಣೆ ಕಾವು ಹೆಚ್ಚಾಗಿದೆ. ಡಿಸೆಂಬರ್ 8 ರಿಂದ 14ರವರೆಗೆ ಮೂರು ಹಂತದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆಯಲಿದೆ.

- Advertisement -
spot_img

Latest News

error: Content is protected !!