Tuesday, April 16, 2024
Homeಕರಾವಳಿಮಂಗಳೂರು: ಕೊಂಕಣಿ ಖ್ಯಾತ ಸಾಹಿತಿ ಫಾ.ವಿ.ಜೆ. ಮಿನೇಜಸ್ ನಿಧನ

ಮಂಗಳೂರು: ಕೊಂಕಣಿ ಖ್ಯಾತ ಸಾಹಿತಿ ಫಾ.ವಿ.ಜೆ. ಮಿನೇಜಸ್ ನಿಧನ

spot_img
- Advertisement -
- Advertisement -

ಮಂಗಳೂರು: ಕೊಂಕಣಿ ಖ್ಯಾತ ಬರಹಗಾರ ಮತ್ತು ಬೋಧಕ ಫಾ.ವಿ.ಜೆ. ಮಿನೇಜಸ್ (80) ಇಂದು ನಿಧನರಾದರು. ಫಾ.ವಿ.ಜೆ. ಮಿನೇಜಸ್ ಅವರು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ‘ನೊಯೆಲ್ಲಾ’ ಮತ್ತು ‘ತುಜಾ ಆಲ್ಬಮೇಕರ್ ಮೊಜಿ ತಸ್ವೀರ್’ ಎಂಬ ಎರಡು ಕಾದಂಬರಿಗಳನ್ನು ಬರೆದಿದ್ದಾರೆ.

ಸ್ವಯಂ ಅನುಭವ ಮತ್ತು ಆಧ್ಯಾತ್ಮಿಕ ಮತ್ತು ಸಾರ್ವಜನಿಕ ಜೀವನದ ಪಾಠಗಳನ್ನು ಆಧರಿಸಿ ‘ಜಿನ್ಯೆಂಥಲ್ ಅನ್ಬಾಗ್’ ಮತ್ತು ‘ಹೆವ್ಶಿಲಿ ಆನಿ ತೆವ್ಶಿಲಿ ಕೂಸ್’ ಎಂಬ ಎರಡು ಗ್ರಂಥಗಳನ್ನು ರಚಿಸಿದ್ದಾರೆ.

ಮೂಡುಬಿದಿರೆ ಸಮೀಪದ ಹೊಸಬೆಟ್ಟು ಮೂಲದ ಫಾ.ವಿ.ಜೆ. ಮಿನೇಜಸ್, 1940ರಲ್ಲಿ ಕೃಷಿಕ ದಂಪತಿ ಲೂವಿಸ್ ಮಿನೇಜಸ್ ಮತ್ತು ಸೆಬೆಸ್ಟಿಯಾನರ ಎರಡನೇ ಮಗನಾಗಿ ಜನಿಸಿದ್ದರು. ಮುಂಬೈನ ಚೌಪತಿಯ ಭವನ ಕಾಲೇಜಿನಲ್ಲಿ ಪತ್ರಿಕೋದ್ಯಮ ಕೋರ್ಸ್ ಮುಗಿಸಿದ್ದ ಇವರು ನಂತರ ಮಂಗಳೂರಿನ ಕ್ಯಾಪುಚಿನ್ ಫಾದರ್ಸ್ ಪ್ರಕಟಣೆಯ ‘ಸೇವಕ್’ ಮಾಸಿಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

ಸೇವಕ್’ ನಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ, ‘ಫ್ರಾನ್ಸಿಸ್ಕನ್ ಆಧ್ಯಾತ್ಮಿಕತೆ’ ವಿಷಯದಲ್ಲಿ ಉನ್ನತ ಅಧ್ಯಯನಕ್ಕಾಗಿ ಅಮೇರಿಕಾಕ್ಕೆ ಹೋದರು. ಭಾರತಕ್ಕೆ ಮರಳಿದ ನಂತರ,ಫಾ. ವಿ ಜೆ ಮಿನೇಜಸ್ ಅವರು ಪೂರ್ಣ ಸಮಯದ ಬೋಧಕರಾದರು.

- Advertisement -
spot_img

Latest News

error: Content is protected !!