Monday, May 20, 2024
Homeಕರಾವಳಿಮಲ್ಪೆ: ಲಾರಿ ಚಾಲಕನ ಅಪಹರಣ; 15 ಲಕ್ಷ ರೂ.ಕೊಡುವಂತೆ ಬೇಡಿಕೆ!

ಮಲ್ಪೆ: ಲಾರಿ ಚಾಲಕನ ಅಪಹರಣ; 15 ಲಕ್ಷ ರೂ.ಕೊಡುವಂತೆ ಬೇಡಿಕೆ!

spot_img
- Advertisement -
- Advertisement -

ಮಲ್ಪೆ: ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದವನನ್ನು ಅಪಹರಿಸಿ ಕೇರಳಕ್ಕೆ ಕರೆದುಕೊಂಡು ಹೋಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ನಿವಾಸಿ ಸುಲೈಮನ್‌ (35) ಎಂಬಾತ ಅಪಹರಣಕ್ಕೊಳಗಾದ ವ್ಯಕ್ತಿ. ಮಲ್ಪೆಯಲ್ಲಿ ಮೀನು ಸಾಗಾಟದ ಲಾರಿ ಚಾಲಕನಾಗಿ ಕೆಲಸಮಾಡುತಿದ್ದ ಈತ ಸೆ .30 ರಂದು ಕೊಪ್ಪದಿಂದ ಮಲ್ಪೆಗೆ ಬಂದಿದ್ದಾನೆ.

ಅ .2ರಂದು ಬೆಳಗ್ಗೆ9 ಗಂಟೆಗೆ ಆತನ ಮೊಬೈಲಿನಿಂದ ತಮ್ಮ ಶಂಶುದ್ದೀನ್ ಗೆ ಕರೆ ಬಂದಿದ್ದು ಸಮೀರ್ ಎಂಬಾತ ಮಾತನಾಡಿ, ಸುಲೈಮಾನ್‌ನನ್ನು ಅಪಹರಿಸಿದ್ದೇವೆ, ಆತನನ್ನು ಬಿಡಬೇಕಾದರೆ 15 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಶಂಶುದ್ದೀನ್‌ ಮತ್ತು ಸಂಬಂಧಿಕರು ಮಲ್ಪೆಗೆ ಬಂದು ವಿಚಾರಿಸಿದಾಗ, ಸುಲೈಮಾನ್ ಮೀನನ್ನು ಮಲ್ಪೆಯಲ್ಲಿ ತೆಗೆದುಕೊಂಡು ಕೇರಳಕ್ಕೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.



ನಂತರ ಸುಲೈಮಾನ್‌ ನ ಮೊಬೈಲಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಸಮೀರ್ ಮೀನು ವ್ಯವಹಾರದಲ್ಲಿ ಸುಲೈಮಾನ್ 15 ಲಕ್ಷ ರೂ. ಕೊಡದೆ ಮೋಸ ಮಾಡಿದ್ದಾನೆ. ಅದ್ದರಿಂದ ಆತನನ್ನು ಕೇರಳದ ಹನಸ್ ಮತ್ತು ಸಹೋದರರು ಅಪಹರಣ ಮಾಡಿದ್ದಾರೆ ನೀವು ಬಂದು 15 ಲಕ್ಷ ಹಣ ಕೊಟ್ಟು ಕರೆದುಕೊಂಡು ಹೋಗಿ ಇಲ್ಲವಾದರೆ ಆತನನ್ನು ಹತ್ಯೆ ಮಾಡಿ ಸಮುದ್ರಕ್ಕೆ ಎಸೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ.

- Advertisement -
spot_img

Latest News

error: Content is protected !!