Friday, June 27, 2025
Homeಕ್ರೀಡೆಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ ಎಬಿಡಿ ವಿಲಿಯರ್ಸ್

ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ ಎಬಿಡಿ ವಿಲಿಯರ್ಸ್

spot_img
- Advertisement -
- Advertisement -

ದುಬೈ: ತಮ್ಮ ಗಡ್ಡಕ್ಕೆ ಹೊಸ ರೂಪ ಕೊಡುವ ಸಲುವಾಗಿ ಐಪಿಎಲ್ ಆಟಗಾರರು ಬ್ರೇಕ್ ದಿ ಬಿಯರ್ಡ್ ಎಂಬ ಹೊಸ ಚಾಲೆಂಜ್ ಮಾಡುತ್ತಿದ್ದಾರೆ. ಮೊದಲು ಇದನ್ನು ಹಾರ್ದಿಕ್ ಪಾಂಡ್ಯ ಮಾಡಿದ್ದರು. ನಂತರ ಕೀರನ್ ಪೊಲಾರ್ಡ್ ಅವರು ಇದನ್ನು ಸ್ವೀಕರಿಸಿದ್ದರು. ನಂತರ ದಿನೇಶ್ ಕಾರ್ತಿಕ್ ಅವರು ಕೂಡ ಈ ಚಾಲೆಂಜ್ ಮಾಡಿದ್ದರು. ಇವೆರೆಲ್ಲರ ನಂತರ ಈಗ ಎಬಿಡಿ ಅವರು ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಮಾಡಿದ್ದಾರೆ.

ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಮಾಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿಕೊಂಡಿರುವ ಎಬಿಡಿ, ಅವರು ಹೇಳಿದಂತೆ ಬದಲಾವಣೆಯನ್ನು ಮಾಡಿದ್ದೇನೆ. ಅವರು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡು ಹೊಸ ಶೈಲಿಯಲ್ಲಿ ನ್ಯೂ ಸ್ಟೈಲ್ ಅನ್ನು ಮಾಡಿದ್ದೇನೆ. ಈ ಹೊಸ ಶೈಲಿ ಮತ್ತು ಸನ್ ಗ್ಲಾಸಸ್ ಹೇಗಿರುತ್ತೆ ಎಂದು ಬರೆದು ದಿನೇಶ್ ಕಾರ್ತಿಕ್ ಮತ್ತು ಕೀರನ್ ಪೊಲಾರ್ಡ್ ಮತ್ತು ಫಾಫ್ ಡು ಪ್ಲೆಸಿಸ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಇದರ ಜೊತೆಗೆ ನನ್ನ ನಂತರ ಮುಂದಿನ ವಾರದಲ್ಲಿ ಈ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಯಾರು ಸ್ವೀಕರಿಸುತ್ತಾರೆ ನೋಡಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಕಳೆದ ವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಕೂಡ ಈ ಚಾಲೆಂಜ್ ಮಾಡಿದ್ದರು. ತಮ್ಮ ಗಡ್ಡಕ್ಕೆ ಹೊಸ ರೂಪವನ್ನು ಕೊಟ್ಟು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೊಸ ಸೀಸನ್, ಹೊಸ ಲೆವೆಲಿಗೆ ಹೋಗುವ ಸಮಯವಿದು ಎಂದು ಬರೆದುಕೊಂಡಿದ್ದರು

- Advertisement -
spot_img

Latest News

error: Content is protected !!